ADVERTISEMENT

ಹವಾಮಾನ ವರದಿ

​ಪ್ರಜಾವಾಣಿ ವಾರ್ತೆ
Published 11 ಏಪ್ರಿಲ್ 2012, 19:30 IST
Last Updated 11 ಏಪ್ರಿಲ್ 2012, 19:30 IST

ರಾಜ್ಯದಾದ್ಯಂತ ಅಲ್ಲಲ್ಲಿ ಮಳೆ
ಬೆಂಗಳೂರು:
ಬುಧವಾರ ಬೆಳಿಗ್ಗೆ 8.30 ಕ್ಕೆ ಕೊನೆಗೊಂಡಂತೆ ಕಳೆದ 24 ಗಂಟೆಗಳಲ್ಲಿ ರಾಜ್ಯದ ಕರಾವಳಿ ಸೇರಿದಂತೆ ಉತ್ತರ ಹಾಗೂ ದಕ್ಷಿಣ ಒಳನಾಡಿನಲ್ಲಿ ಮಳೆಯಾಗಿದೆ.

ಕುಡಚಿ 4 ಸೆಂ.ಮೀ. ಮಂಗಳೂರು ವಿಮಾನ ನಿಲ್ದಾಣ, ಬೆಳಗಾವಿ ವಿಮಾನ ನಿಲ್ದಾಣ, ಹುಕ್ಕೇರಿ, ಸೇಡಬಾಳ್, ರಬಕವಿ, ಮಹಾಲಿಂಗಪುರ, ಅಫ್ಜಲ್‌ಪುರ, ಶಿಗ್ಗಾವಿ, ಗುಳೇದಗುಡ್ಡ, ರಾಮದುರ್ಗ, ನಾಪೋಕ್ಲು, ಕಳಸ, ಬಾಳೇಹೊನ್ನೂರು, ಬೇಲೂರು, ತಿಪಟೂರು 2, ಮಾಣಿ, ಬೆಳ್ತಂಗಡಿ, ಧರ್ಮಸ್ಥಳ, ಪುತ್ತೂರು, ರಾಯಬಾಗ, ಹಿಡಕಲ್, ಜಮಖಂಡಿ, ಬಾದಾಮಿ, ಬಸವನ ಬಾಗೇವಾಡಿ, ಮುದ್ದೇಬಿಹಾಳ, ಕಡೂರು, ಸಕಲೇಶಪುರ, ಹಾಸನ, ಮೂರ್ನಾಡಿನಲ್ಲಿ ತಲಾ 1 ಸೆಂ.ಮೀ. ಮಳೆಯಾಗಿದೆ. ಗುಲ್ಬರ್ಗದಲ್ಲಿ ಗರಿಷ್ಠ ಉಷ್ಣಾಂಶ  40.1 ಡಿಗ್ರಿ ಸೆಲ್ಸಿಯಸ್ ದಾಖಲಾಗಿದೆ.

ಮುನ್ಸೂಚನೆ: ಮುಂದಿನ 48 ಗಂಟೆಗಳ ಕಾಲ ರಾಜ್ಯದಲ್ಲಿ ಮಳೆಯಾಗುವ ಸಂಭವವಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.