ADVERTISEMENT

ಹಿಂದುಳಿದ ಸಮಾಜದವರಿಗೆ ಕೋಟಿ ಕೋಟಿ ಅನುದಾನ

​ಪ್ರಜಾವಾಣಿ ವಾರ್ತೆ
Published 21 ಮಾರ್ಚ್ 2012, 6:35 IST
Last Updated 21 ಮಾರ್ಚ್ 2012, 6:35 IST

ಬೆಂಗಳೂರು : ಮುಂಗಡಪತ್ರದಲ್ಲಿ ಹಿಂದುಳಿದ ಸಮಾಜದವರಿಗೆ ಕೋಟಿಗಟ್ಟಲೆ ಅನುದಾನ ನೀಡಲಾಗಿದೆ. ಇದರ ಜತೆಗೆ ಹಲವು ದೇಗುಲಗಳಿಗೂ ಲಕ್ಷಗಟ್ಟಲೆ ಅನುದಾನ ನೀಡಲಾಗಿದೆ.

ಅನುದಾನಗಳ ವಿವರ:

1. ರಾಣೆಬೆನ್ನೂರಿನ ಸಿದ್ದಾರೂಢ ಸ್ವಾಮಿ ಟ್ರಸ್ಟ್‌ಗೆ 1 ಕೋಟಿ ರೂ.

2. ಹೊಸದುರ್ಗದ ಉಪ್ಪಾರ ಸಮಾಜಕ್ಕೆ 1 ಕೋಟಿ ರೂ.

ADVERTISEMENT

3. ಕುಂಬಾರ ಭವನ ನಿರ್ಮಾಣಕ್ಕೆ 1 ಕೋಟಿ ರೂ.

4. ವಿಶ್ವಗಾಣಿಗ ಸಮುದಾಯ ಟ್ರಸ್ಟ್  1 ಕೋಟಿ ರೂ.

5. ಬಲಿಜ ಸಮಾಜಕ್ಕೆ 1 ಕೋಟಿ ರೂ.

6. ತಿಗಳ ಸಮಾಜಕ್ಕೆ 1 ಕೋಟಿ ರೂ.

7. ಧಾರವಾಡದಲ್ಲಿ ಕನಕ ಅಧ್ಯಯನ ಪೀಠ ಸ್ತಾಪನೆಗೆ 1 ಕೋಟಿ ರೂ.

8. ಬೆಂಗಳೂರಿನ ತೊಗಟವೀರ ಕ್ಷತ್ರಿಯ ಸಮಾಜಕ್ಕೆ 50 ಲಕ್ಷ ರೂ.

9. ಸೋಲೂರಿನ ಆರ್ಯ ಈಡಿಗ ಸಮಾಜಕ್ಕೆ 1 ಕೋಟಿ ರೂ.

10. ಮಡಿವಾಳ ಸಂಘಕ್ಕೆ 50 ಲಕ್ಷ ರೂ.

11. ಹಿಂದುಳಿದ ವರ್ಗಗಳ  ಒಕ್ಕೂಟವು ದಶಮಾನೋತ್ಸವ ಆಚರಿಸಲು 50 ಲಕ್ಷ ರೂ

12. ಕೊರಟಗೆರೆ ಅನ್ನಪೂರ್ಣ ದೇವಸ್ಥಾನಕ್ಕೆ 25 ಲಕ್ಷ ರೂ

13. ಸಫಾಯಿ ಕರ್ಮಚಾರಿ ಆಯೋಗ ರಚನೆ

14. ಕುಂಬಾರ ಭವನ ನಿರ್ಮಾಣಕ್ಕೆ 1 ಕೋಟಿ ರೂ

15. ಬಾಳೆಹೊನ್ನೂರು ಶ್ರೀ ಜಗದ್ಗುರು ರಂಭಾಪುರಿ ಪೀಠದ ಮೂಲಸ್ಥಳದಲ್ಲಿ ಜೀರ್ಣೋದ್ದಾರಕ್ಕೆ  2 ಕೋಟಿ ರೂ

16. ಶ್ರೀ ಜಗದ್ಗುರು ಶಂಕರಾಚಾರ್ಯ ಮಹಾ ಸಂಸ್ಥಾನಂ ಶೃಂಗೇರಿ, ಇವರಿಂದ ಮೈಸೂರಿನಲ್ಲಿ ಸಂದೇಶ ಭವನ ನಿರ್ಮಿಸಲು 2 ಕೋಟಿ ರೂ

17. ಅಂಬಿಗರ ಚೌಡಯ್ಯ ಸ್ಮಾರಕ ಅಭಿವೃದ್ಧಿಗೆ 1 ಕೋಟಿ

ಇನ್ನೂ ಹಲವು ಹಿಂದುಳಿದ ಜಾತಿ, ಸಮುದಾಯಗಳಿಗೆ ಕೋಟಿ ರೂಗಳ ಅನುದಾನ ನೀಡಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.