ಬೆಂಗಳೂರು: ಕನಿಷ್ಠ ವೆಚ್ಚದಲ್ಲಿ ವ್ಯಾಪಕ ಪ್ರಚಾರ ಪಡೆಯುವ ಉದ್ದೇಶದಿಂದ ಹೊಸ ಜಾಹೀರಾತು ನೀತಿ ಜಾರಿಗೊಳಿಸಲು ಸರ್ಕಾರ ನಿರ್ಧರಿಸಿದೆ. ಹೊಸ ನೀತಿ ಪ್ರಕಾರದ ರಾಜ್ಯ ಸರ್ಕಾರದ ಎಲ್ಲಾ ಇಲಾಖೆಗಳು ತಮ್ಮ ಜಾಹೀರಾತುಗಳನ್ನು ಸರ್ಕಾರವು ನಿಗದಿಪಡಿಸುವ ರಿಯಾಯಿತಿ ದರದಲ್ಲಿ ವಾರ್ತಾ ಇಲಾಖೆಯ ಮುಖಾಂತರವೇ ಬಿಡುಗಡೆ ಮಾಡಬೇಕು.
ವಾರ್ತಾ ಇಲಾಖೆಯ ಆಡಳಿತ ಮತ್ತು ಮಾಹಿತಿ ಪ್ರಸರಣವನ್ನು ಕರ್ನಾಟಕ ಮಾಹಿತಿ ಜಾಲದ ಅಡಿಯಲ್ಲಿ ಸಂಪೂರ್ಣ ಗಣಕೀಕರಿಸಲಾಗುವುದು. ಆಡಳಿತದಲ್ಲಿ ಪಾರದರ್ಶಕತೆ ತರಲು ಮತ್ತು ಆಧುನಿಕ ಮಾಧ್ಯಮದ ವೇಗದೊಂದಿಗೆ ಹೊಂದಿಕೊಳ್ಳಲು ಈ ಮಾಹಿತಿ ಜಾಲವು ನೆರವಾಗಲಿದೆ.
*ಬೆಂಗಳೂರು ನಗರದ ಶ್ರಿ ಕಂಠೀರವ ಸ್ಟುಡಿಯೊ ಆವರಣದಲ್ಲಿ ನಿರ್ಮಿಸುತ್ತಿರುವ ದಿ. ಡಾ ರಾಜ್‌ಕುಮಾರ್ ಸ್ಮಾರಕದ ಮೊದಲ ಹಂತದ ಕಾಮಗಾರಿ ಪೂರ್ಣಗೊಂಡಿದ್ದು, ಶೀಘ್ರ ಲೋಕಾರ್ಪಣೆ
*ವಾರ್ಷಿಕ 75 ಗುಣಾತ್ಮಕ ಕನ್ನಡ ಚಲನಚಿತ್ರಗಳಿಗೆ ನೀಡುತ್ತಿರುವ ಸಹಾಯಧನ 100 ಚಲನಚಿತ್ರಗಳಿಗೆ ವಿಸ್ತರಣೆ
*ದಿ. ಡಾ. ವಿಷ್ಣುವರ್ಧನ ಸ್ಮಾರಕ ನಿರ್ಮಾಣಕ್ಕೆ 2 ಎಕರೆ ಜಮೀನು ಮಂಜೂರು ಮಾಡಿದ್ದು, ಶೀಘ್ರ ಕಾಮಗಾರಿ ಆರಂಭ
*ಕನ್ನಡ ವಾಕ್‌ಚಲನಚಿತ್ರವು 75 ವರ್ಷ ಪೂರೈಸಿರುವ ನೆನಪಿಗಾಗಿ ಬೆಂಗಳೂರಿನಲ್ಲಿ ನಿರ್ಮಿಸುತ್ತಿರುವ ಅಮೃತ ಮಹೋತ್ಸವ ಭವನದ ಬಾಕಿ ಕಾಮಗಾರಿಗಳಿಗೆ ರೂ 2.50 ಕೋಟಿ ಅನುದಾನ
*ವಾರ್ತಾ ಇಲಾಖೆಗೆ ರೂ 88 ಕೋಟಿ ಅನುದಾನ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.