ADVERTISEMENT

‘ಗಡಿನಾಡ ನಡಿಗೆ ಬೆಂಗಳೂರು ಕಡೆಗೆ’

​ಪ್ರಜಾವಾಣಿ ವಾರ್ತೆ
Published 23 ಸೆಪ್ಟೆಂಬರ್ 2013, 20:00 IST
Last Updated 23 ಸೆಪ್ಟೆಂಬರ್ 2013, 20:00 IST

ಹುಬ್ಬಳ್ಳಿ: ಗಡಿನಾಡ ಅಭಿವೃದ್ಧಿಗೆ ಆಗ್ರಹಿಸಿ ಮಹಾರಾಷ್ಟ್ರದ ಜತ್ತದಿಂದ ಬೆಂಗಳೂರಿನವರೆಗೆ ಸೈಕಲ್‌ ಜಾಥಾ ಹೊರಟಿ ರುವ ಸುಭಾಷ್‌ ಬೆಳ್ಳುಬ್ಬಿ ಹಾಗೂ ಗಿರಿಮಲ್ಲ ಮೂಡಳಿ ಸೋಮ ವಾರ ಹುಬ್ಬಳ್ಳಿಗೆ ಬಂದಿದ್ದರು.

ಈ ಸಂದರ್ಭದಲ್ಲಿ ‘ಪ್ರಜಾ ವಾಣಿ’ಯೊಂದಿಗೆ ಮಾತನಾಡಿದ ಸುಭಾಷ್‌ ಬೆಳ್ಳುಬ್ಬಿ, ’ಗಡಿ ನಾಡು ಹಾಗೂ ಗಡಿನಾಡ ಕನ್ನಡಿಗರತ್ತ ಸರ್ಕಾರ ಗಮನ ಕೊಡ ಬೇಕು ಎಂದು ಆಗ್ರಹಿಸಲು ನಾವು ಸೈಕಲ್‌ ಜಾಥಾ ಹೊರಟಿ ದ್ದೇವೆ. ಕಳೆದ ವರ್ಷವೂ ನಾವು ಇದೇ ರೀತಿ ಜತ್ತದಿಂದ ಬೆಂಗ ಳೂರಿನವರೆಗೆ ಸೈಕಲ್‌ ಜಾಥಾ ನಡೆಸಿದ್ದೆವು. ಈ ಬಾರಿ 19ನೇ ತಾರೀಖಿನಿಂದ ಜಾಥಾ ಹೊರಟಿದ್ದು, ಇದೇ 25ಕ್ಕೆ ಬೆಂಗಳೂರು ತಲುಪಿ, ಮುಖ್ಯಮಂತ್ರಿಯವರಿಗೆ ಗಡಿನಾಡ ಅಭಿವೃದ್ಧಿ ಕುರಿತಂತೆ ಮನವಿ ಸಲ್ಲಿಸುತ್ತೇವೆ’ ಎಂದರು.

ಸಿಂಧೂರ, ಜಮಖಂಡಿ, ರಾಮದುರ್ಗ, ಹುಬ್ಬಳ್ಳಿ ಮಾರ್ಗ ಮೂಲಕ ಸೈಕಲ್‌ ಜಾಥಾ ಹೊರಟಿರುವ ಇವರು, ರಾಷ್ಟ್ರೀಯ ಹೆದ್ದಾರಿ 4ರ ಮೂಲಕ ಬೆಂಗಳೂರು ತಲುಪಲಿದ್ದಾರೆ. ‘ಜತ್ತದ ಅಸಂಘಟಿತ ಕನ್ನಡಿಗರಾದ ನಾವು, ಮಾಧ್ಯಮಗಳ ಮೂಲಕ, ಜನಪ್ರತಿನಿಧಿಗಳ ಮೂಲಕ ಎಷ್ಟೇ ಬಾರಿ ಮನವಿ ಸಲ್ಲಿಸಿದರೂ, ಕರ್ನಾಟಕ ಸರ್ಕಾರ ಗಂಭೀರವಾಗಿ ಪರಿಗಣಿಸಿಲ್ಲ. ಈ ಮೂಲಕ ವಾದರೂ ಸರ್ಕಾರದ ನಮ್ಮತ್ತ ಗಮನ ಕೊಡಲಿ ಎಂಬ ಉದ್ದೇಶದಿಂದ ಜಾಥಾ ಹೊರಟಿದ್ದೇವೆ’ ಎಂದು ಅವರು ಹೇಳಿದರು.   

‘ಶಿಕ್ಷಣ ಹಾಗೂ ನೌಕರಿಯಲ್ಲಿ ಗಡಿನಾಡ ಕನ್ನಡಿಗರಿಗಾಗಿ ಶೇ 5ರಷ್ಟು ಮೀಸಲಾತಿ ಜಾರಿಯಾಗಬೇಕು, ಮುಖ್ಯಮಂತ್ರಿಗಳು ಗಡಿನಾಡ ಪ್ರದೇಶಗಳಿಗೆ ಭೇಟಿ ಕೊಡಬೇಕು, ಪ್ರಾಧಿಕಾರ, ಅಕಾ ಡೆಮಿಗಳಿಗೆ ಗಡಿನಾಡ ಕನ್ನಡಿಗರನ್ನು ಸದಸ್ಯರನ್ನಾಗಿ ನೇಮಿ ಬೇಕು, ಕರ್ನಾಟಕದಲ್ಲಿ ಆಯೋಜಿತ ತರಬೇತಿ ಗಳಿಗೆ ಗಡಿನಾಡ ಕನ್ನಡಿಗರಿಗೂ ಪ್ರವೇಶ ಸಿಗಬೇಕು ಎಂಬ ಬೇಡಿಕೆ ಇಟ್ಟುಕೊಂಡು ಜಾಥಾ ಹೊರಟಿದ್ದೇವೆ’ ಎಂದು ಸುಭಾಷ್‌ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.