ADVERTISEMENT

ಬೆಂಗಳೂರಿನ ಮಹಿಳೆಗೆ ಕೋವಿಡ್‌–19 ದೃಢ: ಸೋಂಕಿತರ ಸಂಖ್ಯೆ 11ಕ್ಕೆ ಏರಿಕೆ

​ಪ್ರಜಾವಾಣಿ ವಾರ್ತೆ
Published 17 ಮಾರ್ಚ್ 2020, 13:13 IST
Last Updated 17 ಮಾರ್ಚ್ 2020, 13:13 IST
   

ಬೆಂಗಳೂರು: ದುಬೈನಿಂದ ಬಂದ ಬೆಂಗಳೂರಿನ ಮಹಿಳೆಗೆ ಕೋವಿಡ್‌–19 ದೃಢಪಟ್ಟಿದ್ದು, ರಾಜ್ಯದಲ್ಲಿ ಒಟ್ಟು ಸೋಂಕಿತರ ಸಂಖ್ಯೆ 11ಕ್ಕೆ ಏರಿಕೆಯಾಗಿದೆ.

67 ವರ್ಷದ ಮಹಿಳೆ ಮಾರ್ಚ್‌ 9ರಂದು ದುಬೈನಿಂದ, ಗೋವಾ ಮಾರ್ಗವಾಗಿ ಬೆಂಗಳೂರಿಗೆ ಬಂದಿದ್ದರು. ಮಹಿಳೆಗೆ ಕಿಡ್ನಿಗೆ ಸಂಬಂಧಿಸಿದ ತೀವ್ರ ಸಮಸ್ಯೆಯೂ ಇದೆ. ಬೆಂಗಳೂರಿಗೆ ಬಂದಾಗಿನಿಂದ ಆಕೆಯನ್ನು ಮನೆಯಲ್ಲೇ ಇರಿಸಲಾಗಿತ್ತು. ಮಾ. 16ರಂದು ಅವರು ತೀವ್ರ ಅನಾರೋಗ್ಯದ ಹಿನ್ನೆಲೆಯಲ್ಲಿ ಆಸ್ಪತ್ರೆಗೆ ದಾಖಲಾಗಿದ್ದರು. ಅಲ್ಲಿ ಪ್ರತ್ಯೇಕ ಕೊಠಡಿಯಲ್ಲಿ ಅವರಿಗೆ ಚಿಕಿತ್ಸೆ ನೀಡಲಾಗಿತ್ತು.

ಇವರು ತಮ್ಮ ಐವರು ಕುಟುಂಬ ಸದಸ್ಯರೂ ಸೇರಿದಂತೆ 21 ಮಂದಿಯೊಂದಿಗೆ ಪ್ರತ್ಯಕ್ಷ, ಪರೋಕ್ಷ ಸಂಪರ್ಕಕ್ಕೆ ಬಂದಿದ್ದಾರೆ. ಅವರೆಲ್ಲರನ್ನೂ ಮನೆಯಲ್ಲಿಯೇ ಇರಿಸಿ ನಿಗಾ ವಹಿಸಲಾಗಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.