ADVERTISEMENT

ಪ್ರಥಮ ಪಿಯುಸಿ ಪ್ರವೇಶ 30ರವರೆಗೆ ಅವಕಾಶ

​ಪ್ರಜಾವಾಣಿ ವಾರ್ತೆ
Published 12 ಜುಲೈ 2022, 18:52 IST
Last Updated 12 ಜುಲೈ 2022, 18:52 IST

ಬೆಂಗಳೂರು: ಪ್ರಥಮ ಪಿಯುಸಿಗೆ ಪ್ರವೇಶ ಪಡೆಯಲು ಜುಲೈ 30ರವರೆಗೆ ಅವಕಾಶ ಕಲ್ಪಿಸಿ ಪದವಿಪೂರ್ವ ಶಿಕ್ಷಣ ಇಲಾಖೆ ಆದೇಶ ಹೊರಡಿಸಿದೆ.

ಸಿಬಿಎಸ್‌ಇ, ಐಸಿಎಸ್‌ಇ ಬೋರ್ಡ್‌ಗಳ 10ನೇ ತರಗತಿ ಫಲಿತಾಂಶ ಪ್ರಕಟಣೆ ವಿಳಂಬದ ಕಾರಣ ಪೋಷಕರ ಮನವಿ, ವಿದ್ಯಾರ್ಥಿಗಳ ಭವಿಷ್ಯದ ದೃಷ್ಟಿಯಿಂದ ಪ್ರವೇಶದ ಅವಧಿ ವಿಸ್ತರಿಸಲಾಗಿದೆ. ಜುಲೈ 30ರ ನಂತರ ಪ್ರವೇಶ ಪಡೆಯಲು ಇಚ್ಚಿಸುವವರು ₹ 670 ದಂಡ ಶುಲ್ಕ ಸಹಿತ ಆ.6ರ ಒಳಗೆ, ₹ 2,890 ದಂಡ ಶುಲ್ಕ ಪಾವತಿಸಿ ಆ.12ರ ಒಳಗೆ ಪ್ರವೇಶ ಪಡೆಯಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT