ADVERTISEMENT

20ರಿಂದ ಹೈಕೋರ್ಟ್‌ಗೆ ರಜೆ

​ಪ್ರಜಾವಾಣಿ ವಾರ್ತೆ
Published 18 ಡಿಸೆಂಬರ್ 2010, 9:00 IST
Last Updated 18 ಡಿಸೆಂಬರ್ 2010, 9:00 IST

ಬೆಂಗಳೂರು: ಹೈಕೋರ್ಟ್‌ಗೆ ಇದೇ 20ರಿಂದ 31ರವರೆಗೆ ಚಳಿಗಾಲದ ರಜೆ ಘೋಷಿಸಲಾಗಿದೆ.  ಆದರೆ, 21, 23, 28 ಹಾಗೂ 30ರಂದು ರಜಾಕಾಲದ ಪೀಠ ಕಾರ್ಯ ನಿರ್ವಹಿಸಲಿದೆ. ಅಂದು ತುರ್ತಾಗಿ ನಡೆಯಬೇಕಿರುವ ಪ್ರಕರಣಗಳ ವಿಚಾರಣೆಯನ್ನು ಮಾತ್ರ ನ್ಯಾಯಮೂರ್ತಿಗಳು ಕೈಗೆತ್ತಿಕೊಳ್ಳಲಿದ್ದಾರೆ.

ಆದರೆ ಈ ಅವಧಿಯಲ್ಲಿ ಧಾರವಾಡ ಹಾಗೂ ಗುಲ್ಬರ್ಗ ಸಂಚಾರಿ ಪೀಠಗಳು ಕಾರ್ಯ ನಿರ್ವಹಿಸುವುದಿಲ್ಲ. ಈ ಪೀಠದ ವ್ಯಾಪ್ತಿಯಲ್ಲಿನ ತುರ್ತು ಪ್ರಕರಣಗಳ ವಿಚಾರಣೆಯನ್ನು ಬೆಂಗಳೂರಿನ ಪ್ರಧಾನ ಪೀಠದಲ್ಲಿಯೇ ನಡೆಸಲಾಗುವುದು.  

ವಿಶೇಷ ಕಲಾಪ: ಮುಖ್ಯ ನ್ಯಾಯಮೂರ್ತಿ ಜೆ.ಎಸ್.ಕೇಹರ್ ನೇತೃತ್ವದ ವಿಭಾಗೀಯ ಪೀಠವು ಶುಕ್ರವಾರ (ಡಿ.17) ವಿಶೇಷ ಕಲಾಪ ನಡೆಸಲಿದೆ. ಕಳೆದ ವಾರ ನ್ಯಾ. ಕೇಹರ್ ಅವರು ನಾಲ್ಕು ದಿನಗಳ ಕಾಲ ಸಂಚಾರಿ ಪೀಠಗಳಲ್ಲಿ ಕಲಾಪ ನಡೆಸಿದ್ದ ಹಿನ್ನೆಲೆಯಲ್ಲಿ ಅದಕ್ಕೆ ಬದಲಾಗಿ ಈ ಕಲಾಪ ನಡೆಸುವುದಾಗಿ ಅವರು ತಿಳಿಸಿದ್ದಾರೆ.

‘ವಕೀಲರು ಶುಕ್ರವಾರ ಕಲಾಪಕ್ಕೆ ಹಾಜರಾಗುವುದು ಕಡ್ಡಾಯವೇನಲ್ಲ. ಒಂದು ವೇಳೆ ಯಾವುದಾದರೂ ಕಾರಣಕ್ಕೆ ಬರಲು ಆಗದಿದ್ದರೆ, ಅಂತಹ ಪ್ರಕರಣಗಳ ವಿಚಾರಣೆಯನ್ನು ಮುಂದೂಡಲಾಗುವುದು. ವಕೀಲರು ಹಾಗೂ ಕಕ್ಷಿದಾರರು ಹೆದರಬೇಕಾದ ಅಗತ್ಯವಿಲ್ಲ’ ಎಂದು ಅವರು ಸ್ಪಷ್ಟಪಡಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.