ADVERTISEMENT

ಮತ್ತೆ 200 ವೈದ್ಯಕೀಯ ಸೀಟು ಲಭ್ಯ: ಕೆಇಎ

​ಪ್ರಜಾವಾಣಿ ವಾರ್ತೆ
Published 17 ಅಕ್ಟೋಬರ್ 2025, 14:45 IST
Last Updated 17 ಅಕ್ಟೋಬರ್ 2025, 14:45 IST
   

ಬೆಂಗಳೂರು: ಕರ್ನಾಟಕದ ನಾಲ್ಕು ಕಾಲೇಜುಗಳಿಗೆ ತಲಾ 50 ವೈದ್ಯಕೀಯ ಸೀಟುಗಳು ಮಂಜೂರಾಗಿದ್ದು, ಎಲ್ಲ 200 ಸೀಟುಗಳನ್ನೂ ಮೂರನೇ ಸುತ್ತಿನ ಸೀಟು ಹಂಚಿಕೆಗೆ ಪರಿಗಣಿಸಲು ಕರ್ನಾಟಕ ಪರೀಕ್ಷಾ ಪ್ರಾಧಿಕಾರ (ಕೆಇಎ) ನಿರ್ಧರಿಸಿದೆ.

ಬೆಂಗಳೂರಿನ ಎಂವಿಜೆ, ಕಲಬುರಗಿಯ ಮಹದೇವಪ್ಪ ರಾಂಪುರೆ, ದಕ್ಷಿಣ ಕನ್ನಡ ಜಿಲ್ಲೆಯ ಕೆ.ವೆಂಕಟರಮಣಗೌಡ ಹಾಗೂ ಮಂಗಳೂರಿನ ಶ್ರೀನಿವಾಸ ವೈದ್ಯಕೀಯ ಕಾಲೇಜುಗಳಿಗೆ ಹೆಚ್ಚುವರಿಯಾಗಿ ತಲಾ 50 ಸೀಟುಗಳನ್ನು ವೈದ್ಯಕೀಯ ಕೌನ್ಸೆಲಿಂಗ್‌ ಪರಿಷತ್‌ ಮಂಜೂರು ಮಾಡಿದೆ. ಮೂರನೇ ಸುತ್ತಿನ ಸೀಟು ಹಂಚಿಕೆ ಪ್ರಕ್ರಿಯೆ ಆರಂಭವಾದ ನಂತರ ಒಟ್ಟು ಒಂಬತ್ತು ಕಾಲೇಜುಗಳ 450 ಸೀಟುಗಳು ಹೆಚ್ಚುವರಿಯಾಗಿ ಲಭ್ಯವಾಗಿವೆ.

ಅ.18ರಂದು ಬೆಳಿಗ್ಗೆ 9ರಿಂದ ಮುಂಗಡ ಶುಲ್ಕ ಪಾವತಿಸಿ ಆಪ್ಷನ್ಸ್ ದಾಖಲಿಸಬಹುದು. ಚಲನ್ ಡೌನ್‌ಲೋಡ್ ಮಾಡಿಕೊಂಡು ಸಂಜೆ 4 ಗಂಟೆ ಒಳಗೆ ಕೋರ್ಸ್ ಶುಲ್ಕ ಕಟ್ಟಬೇಕು. ಆಪ್ಷನ್ಸ್ ದಾಖಲಿಸಲು ಸಂಜೆ 5 ಗಂಟೆವರೆಗೆ ಅವಕಾಶ ಇರುತ್ತದೆ. ಈಗಾಗಲೇ ವೈದ್ಯಕೀಯ ಕಾಲೇಜುಗಳಲ್ಲಿ ಪ್ರವೇಶ ಪಡೆದವರಿಗೂ ಆಪ್ಷನ್ಸ್‌ ದಾಖಲಿಸಲು ಅ.18ರಂದು ಬೆಳಿಗ್ಗೆ 8 ಗಂಟೆವರೆಗೆ ಅವಕಾಶ ಕಲ್ಪಿಸಲಾಗಿದೆ ಎಂದು ಕೆಇಎ ಕಾರ್ಯನಿರ್ವಾಹಕ ನಿರ್ದೇಶಕ ಎಚ್.ಪ್ರಸನ್ನ ಹೇಳಿದ್ದಾರೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.