ADVERTISEMENT

ವಿಧಾನಸಭೆ ಚುನಾವಣೆ– 25 ಪ್ರಖರ ಹಿಂದುವಾದಿಗಳು ಸ್ಪರ್ಧೆ: ಮುತಾಲಿಕ್‌

​ಪ್ರಜಾವಾಣಿ ವಾರ್ತೆ
Published 13 ನವೆಂಬರ್ 2022, 20:52 IST
Last Updated 13 ನವೆಂಬರ್ 2022, 20:52 IST
ಶ್ರೀರಾಮ ಸೇನೆಯ ದತ್ತಮಾಲಾ ಅಭಿಯಾನದ ಕೊನೆ ದಿನ ಭಾನುವಾರ ಚಿಕ್ಕಮಗಳೂರು ತಾಲ್ಲೂಕಿನ ಬಾಬಾಬುಡನ್‌ ಗಿರಿಯಲ್ಲಿ ದತ್ತ ಪಾದುಕೆ ದರ್ಶನಕ್ಕಾಗಿ ಗುಹೆಯೊಳಕ್ಕೆ ತೆರಳಲು ಸಾಲಾಗಿ ನಿಂತಿದ್ದ ಭಕ್ತರು. ಎ.ಎನ್‌.ಮೂರ್ತಿ/ಪ್ರಜಾವಾಣಿ ಚಿತ್ರ
ಶ್ರೀರಾಮ ಸೇನೆಯ ದತ್ತಮಾಲಾ ಅಭಿಯಾನದ ಕೊನೆ ದಿನ ಭಾನುವಾರ ಚಿಕ್ಕಮಗಳೂರು ತಾಲ್ಲೂಕಿನ ಬಾಬಾಬುಡನ್‌ ಗಿರಿಯಲ್ಲಿ ದತ್ತ ಪಾದುಕೆ ದರ್ಶನಕ್ಕಾಗಿ ಗುಹೆಯೊಳಕ್ಕೆ ತೆರಳಲು ಸಾಲಾಗಿ ನಿಂತಿದ್ದ ಭಕ್ತರು. ಎ.ಎನ್‌.ಮೂರ್ತಿ/ಪ್ರಜಾವಾಣಿ ಚಿತ್ರ   

ಚಿಕ್ಕಮಗಳೂರು: ‘ರಾಜ್ಯದಲ್ಲಿ 2023ರ ವಿಧಾನಸಭೆ ಚುನಾವಣೆಯಲ್ಲಿ 25 ಪ್ರಖರ ಹಿಂದುತ್ವವಾದಿಗಳು ಸ್ವತಂತ್ರ ಅಭ್ಯರ್ಥಿಗಳಾಗಿ ಕಣಕ್ಕಿಳಿಯುತ್ತೇವೆ’ ಎಂದು ಶ್ರೀರಾಮ ಸೇನೆ ರಾಷ್ಟ್ರೀಯ ಅಧ್ಯಕ್ಷ ಪ್ರಮೋದ್‌ ಮುತಾಲಿಕ್‌ ತಿಳಿಸಿದರು.

ತಾಲ್ಲೂಕಿನ ಬಾಬಾಬುಡನ್‌ಗಿರಿಯಲ್ಲಿ ಭಾನುವಾರ ಸುದ್ದಿಗಾರರೊಂದಿಗೆ ಅವರು ಮಾತನಾಡಿ, ‘ಪ್ರಖರ ಹಿಂದುತ್ವವಾದಿಗಳು, ಸ್ವಾಮೀಜಿಗಳು ರಾಜಕೀಯ ಪ್ರವೇಶಿಸುತ್ತೇವೆ. ಹಿಂದೂಗಳ ರಕ್ಷಣೆಯ ಸಂಕಲ್ಪ ತೊಟ್ಟಿದ್ದೇವೆ’ ಎಂದು ಹೇಳಿದರು.

‘ದತ್ತ ಪೀಠ ಹೋರಾಟದ ಲಾಭ ಪಡೆದು ಬಿಜೆಪಿಯವರು ಅಧಿಕಾರ ಹಿಡಿದಿದ್ದಾರೆ. ಆದರೆ, ಹಿಂದುತ್ವದ ರಕ್ಷಣೆ ಆಗಿಲ್ಲ. ಬಿಜೆಪಿಯಿಂದ ಸ್ಪರ್ಧಿಸಿ ಗೆದ್ದಿರುವವರು ಹಿಂದುತ್ವ ರಕ್ಷಿಸಲು ವಿಫಲರಾಗಿದ್ದಾರೆ. ಹೀಗಾಗಿ, ಪ್ರಖರ ಹಿಂದುತ್ವವಾದಿಗಳು ರಾಜಕೀಯ ಪ್ರವೇಶಕ್ಕೆ ಮುಂದಾಗಿದ್ದೇವೆ’ ಎಂದು ಪ್ರತಿಪಾದಿಸಿದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.