ADVERTISEMENT

ಕೆಇಎ ತಪ್ಪಿನಿಂದ 2.50 ಅಂಕ ನಷ್ಟ: ಆರೋಪ

​ಪ್ರಜಾವಾಣಿ ವಾರ್ತೆ
Published 11 ಜುಲೈ 2022, 18:24 IST
Last Updated 11 ಜುಲೈ 2022, 18:24 IST

ಬೆಂಗಳೂರು: ಸಹಾಯಕ ಪ್ರಾಧ್ಯಾಪಕರ ನೇಮಕಾತಿ ಪರೀಕ್ಷೆಯ ಐಚ್ಛಿಕ ಕನ್ನಡ ಪತ್ರಿಕೆಯಲ್ಲಿ ತಾತ್ಕಾಲಿಕ ಸರಿ ಕೀ ಉತ್ತರ ಗಳಲ್ಲಿ ‘ಸರಿ’ ಆಗಿದ್ದ ಉತ್ತರವನ್ನು, ಅಂತಿಮ ಕೀ ಉತ್ತರದಲ್ಲಿ ‘ತಪ್ಪು’ ಎಂದು ಪರಿಗಣಿಸಿ ಕರ್ನಾಟಕ ಪರೀಕ್ಷಾ ಪ್ರಾಧಿಕಾರ (ಕೆಇಎ) ಎಡವಟ್ಟು ಮಾಡಿದೆ ಎಂದು ಕೆಲವು ಅಭ್ಯರ್ಥಿಗಳು ದೂರಿದ್ದಾರೆ.

‘ಕೆಇಎಯ ಈ ಎಡವಟ್ಟಿನಿಂದಾಗಿ, ತಾತ್ಕಾಲಿಕ ಸರಿ ಕೀ ಉತ್ತರದಲ್ಲಿದ್ದಂತೆ ಉತ್ತರಿಸಿದ ಅಭ್ಯರ್ಥಿಗಳಿಗೆ 2 ಅಂಕ ಮತ್ತು ಉತ್ತರ ತಪ್ಪು ಎಂಬ ಕಾರಣಕ್ಕೆ ಅರ್ಧ ಅಂಕ ಹೀಗೆ ಒಟ್ಟು 2.50 ಅಂಕ ಕಡಿಮೆ ಆಗಿದೆ. ಕೆಇಎ ಮಾಡಿದ ತಪ್ಪಿಗೆ 2.50 ಅಂಕ ನಷ್ಟ ವಾಗುವ ಅಭ್ಯರ್ಥಿಗಳು ಹುದ್ದೆ ಗಿಟ್ಟಿಸಿಕೊಳ್ಳುವ ಅವಕಾಶದಿಂದಲೇ ವಂಚಿತರಾಗಿ ದ್ದಾರೆ’ ಎಂದೂ ಅಭ್ಯರ್ಥಿಗಳು ಆರೋಪಿಸಿ ದ್ದಾರೆ.

‘ಎ-4 ಸರಣಿಯ ಪ್ರಶ್ನೆ ಸಂಖ್ಯೆ 37 ಹೇಳಿಕೆ- ವಿವರಣೆ ರೂಪದ್ದು. ಈ ಪ್ರಶ್ನೆಗೆ ತಾತ್ಕಾಲಿಕ ಸರಿ ಕೀ ಉತ್ತರ ಗಳಲ್ಲಿ ನೀಡಿದ್ದ ‘ಬಿ’ ಆಯ್ಕೆಯೇ ಸರಿ ಯಾಗಿತ್ತು. ಹೀಗಾಗಿ ಯಾರೂ ಆಕ್ಷೇ ಪಣೆ ಸಲ್ಲಿಸಿರಲಿಲ್ಲ. ಆದರೆ, ಜುಲೈ 19 ರಂದು ಪ್ರಕಟಿಸಿರುವ ಅಂತಿಮ ಕೀ ಉತ್ತರದಲ್ಲಿ ತಪ್ಪಾದ ‘ಸಿ’ ಆಯ್ಕೆಯನ್ನು ಸರಿ ಉತ್ತರವೆಂದು ಪರಿಗಣಿಸಲಾ
ಗಿದೆ. ಕೆಇಎಯ ವಿಷಯ ತಜ್ಞರ ಸಮಿತಿ ಯಾವ ಆಧಾರದಲ್ಲಿ ಈ ಉತ್ತರವನ್ನು ನಿರ್ಧರಿಸಿ, ಅಂತಿಮ ಕೀ ಉತ್ತರ
ಪ್ರಕಟಿಸಲಾಗಿದೆಯೊ, ಇಲ್ಲವೊ ತಿಳಿಯುತ್ತಿಲ್ಲ’ ಎಂದೂ ಅಭ್ಯರ್ಥಿಗಳು ಹೇಳಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.