ಬೆಂಗಳೂರು: ವಿವಿಧ ಶ್ರೇಣಿಯ ಅಧೀನ ನ್ಯಾಯಾಲಯಗಳ 264 ನ್ಯಾಯಾಧೀಶರನ್ನು ವರ್ಗಾವಣೆಗೊಳಿಸಿ ಹೈಕೋರ್ಟ್ ರಿಜಿಸ್ಟ್ರಾರ್ ಜನರಲ್ ಆದೇಶ ಹೊರಡಿಸಿದ್ದಾರೆ. ಮೇ 21ರಿಂದ ಈ ವರ್ಗಾವಣೆ ಜಾರಿಗೆ ಬರಲಿದೆ.
46 ಜಿಲ್ಲಾ ನ್ಯಾಯಾಧೀಶರು, ತ್ವರಿತ ನ್ಯಾಯಾಲಯಗಳ 17 ನ್ಯಾಯಾಧೀಶರು, 66 ಹಿರಿಯ ಸಿವಿಲ್ ನ್ಯಾಯಾಧೀಶರು ಮತ್ತು 135 ಸಿವಿಲ್ ನ್ಯಾಯಾಧೀಶರನ್ನು ವರ್ಗಾವಣೆ ಮಾಡಲಾಗಿದೆ. ಈ ಸಂಬಂಧ ಶನಿವಾರವೇ ಆದೇಶ ಹೊರಡಿಸಲಾಗಿತ್ತು. ಭಾನುವಾರ ಹೈಕೋರ್ಟ್ ವೆಬ್‌ಸೈಟ್‌ನಲ್ಲಿ ವರ್ಗಾವಣೆ ವಿವರವನ್ನು ಪ್ರಕಟಿಸಲಾಗಿದೆ.
ಹೈಕೋರ್ಟ್‌ನ ಧಾರವಾಡ ಸಂಚಾರಿ ಪೀಠದ ರಿಜಿಸ್ಟ್ರಾರ್ ಜನರಲ್ ಹುದ್ದೆಯಲ್ಲಿರುವ ಎಸ್.ಎಂ.ಶಿವನಗೌಡರ್ ಅವರನ್ನು ಕಾನೂನು ಇಲಾಖೆಯ ಕಾರ್ಯದರ್ಶಿ ಹುದ್ದೆಗೆ ನೇಮಕ ಮಾಡಲಾಗಿದೆ.
ಜಿಲ್ಲಾ ನ್ಯಾಯಾಧೀಶರು: ಕೆ.ನಿಂಗೇಗೌಡ- ಬೆಂಗಳೂರು ನಗರದ 8ನೇ ಹೆಚ್ಚುವರಿ ಸಿವಿಲ್ ಮತ್ತು ಸೆಷನ್ಸ್ ನ್ಯಾಯಾಧೀಶ, ವಸಂತ್ ಹನುಮಂತ ರಾವ್ ಕುಲಕರ್ಣಿ- ರಾಯಚೂರಿನ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶ, ಜೆ.ಎಸ್.ಸೋಮಶೇಖರ- ಬೆಂಗಳೂರು ನಗರದ 30ನೇ ಹೆಚ್ಚುವರಿ ಸಿವಿಲ್ ಮತ್ತು ಸೆಷನ್ಸ್ ನ್ಯಾಯಾಧೀಶ, ಜಿ.ಕೆ. ಸೋಮನಾಥ್- 22ನೇ ಹೆಚ್ಚುವರಿ ಸಿವಿಲ್ ಮತ್ತು ಸೆಷನ್ಸ್ ನ್ಯಾಯಾಧೀಶ, ಬಿ.ಬಾಲಕೃಷ್ಣ- ಬೆಂಗಳೂರು ನಗರದ 18ನೇ ಸಿವಿಲ್ ಮತ್ತು ಸೆಷನ್ಸ್ ನ್ಯಾಯಾಧೀಶ, ಕೆ.ಎ.ಲಲಿತಾ- ಲೋಕಾಯುಕ್ತದ ಹೆಚ್ಚುವರಿ ರಿಜಿಸ್ಟ್ರಾರ್, ಶರಶ್ಚಂದ್ರ ಬಸಪ್ಪ ಅಂಗಡಿ- ಬೆಂಗಳೂರು ನಗರದ 31ನೇ ಹೆಚ್ಚುವರಿ ಸಿವಿಲ್ ಮತ್ತು ಸೆಷನ್ಸ್ ನ್ಯಾಯಾಧೀಶ.
ಜಿ.ಡಿ.ನರಸಿಂಹಮೂರ್ತಿ- ದಕ್ಷಿಣ ಕನ್ನಡ ಜಿಲ್ಲಾ 1ನೇ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶ, ಸೋಮರಾಜು- ಬೆಂಗಳೂರು ನಗರದ 48ನೇ ಹೆಚ್ಚುವರಿ ಸಿವಿಲ್ ಮತ್ತು ಸೆಷನ್ಸ್ ನ್ಯಾಯಾಧೀಶ, ಪಿ.ಎನ್.ದೇಸಾಯಿ- ದಕ್ಷಿಣ ಕನ್ನಡದ 2ನೇ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶ, ಜೆ.ಎಸ್. ಚಿಕ್ಕಣ್ಣವರ್- ಬೆಂಗಳೂರು ನಗರದ 2ನೇ ಹೆಚ್ಚುವರಿ ಕಾರ್ಮಿಕ ನ್ಯಾಯಾಲಯ, ಬಿ.ಎಸ್.ಸಪ್ಪಣ್ಣವರ- ಕರ್ನಾಟಕ ಆಡಳಿತ ನ್ಯಾಯಮಂಡಳಿ ಸದಸ್ಯರು, ಖಾಜಿ ಜಯಬುನ್ನೀಸಾ ಮೊಹಿಯುದ್ದೀನ್- ತುಮಕೂರು 2ನೇ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶರು, ಆರ್.ಬಿ. ಧರ್ಮಗೌಡರ್- ವಿಜಾಪುರದ 1ನೇ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶ, ಅಶ್ವತ್ಥನಾರಾಯಣ- ಮೈಸೂರು 3ನೇ ಹೆಚ್ಚುವರಿ ಜಿಲ್ಲಾ ಹಾಗೂ ಸೆಷನ್ಸ್ ನ್ಯಾಯಾಧೀಶ, ಎಚ್.ಎಂ. ನಂಜುಂಡಸ್ವಾಮಿ- ಶಿವಮೊಗ್ಗದ ಹೆಚ್ಚುವರಿ ಜಿಲ್ಲಾ ಹಾಗೂ ಸೆಷನ್ಸ್ ನ್ಯಾಯಾಧೀಶ.
ಅರುಣ್ ಚೌಡಾಪುರಕರ್- ಬೆಂಗಳೂರು ನಗರ ಪ್ರಧಾನ ಸಿವಿಲ್ ಮತ್ತು ಸೆಷನ್ಸ್ ನ್ಯಾಯಾಧೀಶ, ಆರ್.ಬಿ. ಬೂದಿಹಾಳ- ಬೆಳಗಾವಿ ಪ್ರಧಾನ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶ, ಮೋಹನ ಎಸ್. ಸಂಕೊಳ್ಳಿ- ಮೈಸೂರು ಪ್ರಧಾನ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶ, ಎಲ್. ಸುಬ್ರಹ್ಮಣ್ಯ- ಕರ್ನಾಟಕ ನ್ಯಾಯಾಂಗ ಅಕಾಡೆಮಿಯ ನಿರ್ದೇಶಕರು, ಎಂ.ಎಸ್. ಬಾಲಕೃಷ್ಣ- ಕೈಗಾರಿಕಾ ನ್ಯಾಯಾಧಿಕರಣ, ಬೆಂಗಳೂರು.
ಎಸ್.ಎಂ. ಶಿವನಗೌಡರ್- ಕಾನೂನು ಇಲಾಖೆಯ ಹೆಚ್ಚುವರಿ ಕಾರ್ಯದರ್ಶಿ, ಅಶೋಕ ಜಿ. ನಿಜಗಣ್ಣವರ- ದಕ್ಷಿಣ ಕನ್ನಡ ಪ್ರಧಾನ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶ, ಎಚ್.ಪಿ. ಸಂದೇಶ್- ಹಾವೇರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶ, ಎಚ್.ಆರ್.ದೇಶಪಾಂಡೆ- ಹೈಕೋರ್ಟ್‌ನ ಧಾರವಾಡ ಸಂಚಾರಿ ಪೀಠದ ರಿಜಿಸ್ಟ್ರಾರ್ ಜನರಲ್, ಕೆ.ಸಿ.ರಾಮಕೃಷ್ಣಯ್ಯ- ಗುಲ್ಬರ್ಗ ಪ್ರಧಾನ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶ, ಎಂ.ಎಸ್.ಬಿಳಕಿ- ಹುಬ್ಬಳ್ಳಿ ಕಾರ್ಮಿಕರ ನ್ಯಾಯಾಲಯ.
ಅಶೋಕ ಎಸ್. ಗದಗ- ವಿಜಾಪುರ ಪ್ರಧಾನ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶ, ಬಿ. ಶಿವಲಿಂಗೇಗೌಡ- ಮಂಡ್ಯ ಪ್ರಧಾನ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶ, ಎಸ್.ಆರ್. ಸೋಮಶೇಖರ- ಕೊಡಗು ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶ, ಎಸ್.ವೈ. ಈರಣ್ಣವರ- ಚಿಕ್ಕಬಳ್ಳಾಪುರ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶ, ಎಸ್.ಎಚ್. ಮಿತ್ತಲಕೋಡ- ರಾಯಚೂರು ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶ, ಡಿ.ಎಸ್. ಶಿಂಧೆ- ಕೊಪ್ಪಳ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶ, ಆರ್.ಎಂ. ಶೆಟ್ಟರ್- ದಕ್ಷಿಣ ಕನ್ನಡ ಕೌಟುಂಬಿಕ ನ್ಯಾಯಾಲಯ, ಸಿ. ಚಂದ್ರಮಲ್ಲೇಗೌಡ- ದಾವಣಗೆರೆ ಕೌಟುಂಬಿಕ ನ್ಯಾಯಾಲಯ.
ದುಂಡಪ್ಪ ಸೋಮಪ್ಪ ಮುತ್ತೂರು- ಲೋಕಾಯುಕ್ತ ಹೆಚ್ಚುವರಿ ರಿಜಿಸ್ಟ್ರಾರ್, ಶ್ರೀದೇವಿ ಎಸ್. ಅಂಗಡಿ- ಬೆಂಗಳೂರು ನಗರ ಕೌಟುಂಬಿಕ ನ್ಯಾಯಾಲಯದ ಮೂರನೆಯ ಹೆಚ್ಚುವರಿ ಪ್ರಧಾನ ನ್ಯಾಯಾಧೀಶರು, ಸಿದ್ಧಪ್ಪ ಚನ್ನಬಸಪ್ಪ ಮರಡಿ- ವಿಜಾಪುರ ಜಿಲ್ಲಾ ಎರಡನೆಯ ಹೆಚ್ಚುವರಿ ಸೆಷನ್ಸ್ ನ್ಯಾಯಾಧೀಶ, ಪ್ರಭಾವತಿ ಎಂ. ಹಿರೇಮಠ- ಬೆಂಗಳೂರು ನಗರ ಕೌಟುಂಬಿಕ ನ್ಯಾಯಾಲಯದ ನಾಲ್ಕನೆಯ ಹೆಚ್ಚುವರಿ ಪ್ರಧಾನ ನ್ಯಾಯಾಧೀಶರು, ಗುಂಜಿಗವಿ ಸಿದ್ಧಪ್ಪ ಭೀಮಪ್ಪ- ಗುಲ್ಬರ್ಗ ಒಂದನೆಯ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶ,
ಪ್ರಕಾಶ್ ಎಲ್. ನಾಡಿಗೇರ್- ಧಾರವಾಡ ಮೂರನೆಯ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶ
ಬಿ.ವಿ. ಪ್ರಕಾಶ್- ವಿಜಾಪುರ ಕೌಟುಂಬಿಕ ನ್ಯಾಯಾಲಯದ ನ್ಯಾಯಾಧೀಶ, ಮಹದೇವಗೌಡ- ಬೆಂಗಳೂರು ನಗರ ನಾಲ್ಕನೆಯ ಹೆಚ್ಚುವರಿ ಸಿವಿಲ್ ಮತ್ತು ಸೆಷನ್ಸ್ ನ್ಯಾಯಾಧೀಶ, ಚನ್ನಬಸಪ್ಪ ಮರಗೂರು- ಬೆಂಗಳೂರು ನಗರ ಕೌಟುಂಬಿಕ ನ್ಯಾಯಾಲಯದ ಐದನೆಯ ಹೆಚ್ಚುವರಿ ಪ್ರಧಾನ ನ್ಯಾಯಧೀಶ, ಮಂಜುಳಾ- ಬೆಂಗಳೂರು ನಗರ ಕೌಟುಂಬಿಕ ನ್ಯಾಯಾಲಯದ ಆರನೆಯ ಹೆಚ್ಚುವರಿ ಪ್ರಧಾನ ನ್ಯಾಯಧೀಶರು, ಶಿವಣ್ಣ- ಬೆಂಗಳೂರು ನಗರ ನಲವತ್ತನೆಯ ಹೆಚ್ಚುವರಿ ಸಿವಿಲ್ ಮತ್ತು ಸೆಷನ್ಸ್ ನ್ಯಾಯಾಧೀಶರು.
ತ್ವರಿತ ನ್ಯಾಯಾಲಯದ ನ್ಯಾಯಾಧೀಶರು: ಎಚ್.ಎಸ್.ರಾಮಕೃಷ್ಣ- ತ್ವರಿತ ನ್ಯಾಯಾಲಯ, ವಿರಾಜಪೇಟೆ; ಸುರೇಶ್ ಎಸ್.ಕೋಲಿಗೇರಿ- ಮಂಡ್ಯ; ಕೆ.ಎನ್.ಲಕ್ಷ್ಮಿನಾರಾಯಣ- ದೊಡ್ಡಬಳ್ಳಾಪುರ; ಜಿ.ಎಂ.ಕುಂಬಾರ್- ಹತ್ತನೇ ಹೆಚ್ಚುವರಿ ನಗರ ಸಿವಿಲ್ ಮತ್ತು ಸೆಷನ್ಸ್ ನ್ಯಾಯಾಧೀಶರು; ನಾರಾಯಣ ವೆಂಕಟರಮಣ ಹೆಗಡೆ- ಕನಕಪುರ; ಸುಧೀರ್ ಹನುಮಂತಪ್ಪ ಕೊರಡ್ಡಿ- ಒಂಬತ್ತನೇ ತ್ವರಿತ ನ್ಯಾಯಾಲಯ ಬೆಂಗಳೂರು ನಗರ; ಗದಿಗೆಪ್ಪ ಸಣ್ಣಬಸಪ್ಪ ಸಂಗ್ರೇಷಿ- ಹತ್ತನೇ ತ್ವರಿತ ನ್ಯಾಯಾಲಯ, ಬೆಂಗಳೂರು ನಗರ; ಶಂಕರಗೌಡ ಲವನಗೌಡ ಪಾಟೀಲ್- ಮೂರನೇ ತ್ವರಿತ ನ್ಯಾಯಾಲಯ, ಹುಣಸೂರು.
ಪ್ರೇಮಾವತಿ ಮಲ್ಲಿಕಾರ್ಜುನ ಮನಗೂಳಿ- ಕೆ.ಜಿ.ಎಫ್; ಎಸ್.ಎಚ್.ರೇಣುಕಾದೇವಿ- ಮೂರನೇ ತ್ವರಿತ ನ್ಯಾಯಾಲಯ, ಬೆಂಗಳೂರು ಗ್ರಾಮಾಂತರ; ಎಚ್.ಕೆ.ಜಗದೀಶ್- ಅನ್ಯಕಾರ್ಯ ನಿಮಿತ್ತ ಹೈಕೋರ್ಟ್ ಸೇವೆಗೆ; ಕೆ.ಅಮರನಾರಾಯಣ- ಉಡುಪಿ; ಗುರುನಾಥ್ ಎಸ್.ರೇವಣಕರ- ಒಂದನೇ ತ್ವರಿತ ನ್ಯಾಯಾಲಯ, ಚಿಕ್ಕಮಗಳೂರು; ಜಿ.ಆರ್.ಪಾಟೀಲ- ಒಂದನೇ ತ್ವರಿತ ನ್ಯಾಯಾಲಯ, ಬೆಂಗಳೂರು ನಗರ; ದೇವೇಂದ್ರಪ್ಪ ಯಮನಪ್ಪ ಬಸಾಪುರ- ಚಿಕ್ಕೋಡಿ; ಗಣೇಶ್ ಗಂಗಾಧರಪ್ಪ ಕುರುವತ್ತಿ- ಸಾಗರ; ಬಿ.ಜಿ.ರಮಾ- ಆರನೇ ತ್ವರಿತ ನ್ಯಾಯಾಲಯ, ಬೆಂಗಳೂರು ನಗರ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.