ADVERTISEMENT

ದ್ವಿತೀಯ ಪಿಯು ಪೂರಕ ಪರೀಕ್ಷೆ ಸೆ.7ರಿಂದ

​ಪ್ರಜಾವಾಣಿ ವಾರ್ತೆ
Published 19 ಆಗಸ್ಟ್ 2020, 19:30 IST
Last Updated 19 ಆಗಸ್ಟ್ 2020, 19:30 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಬೆಂಗಳೂರು:ದ್ವಿತೀಯ ಪಿಯುಸಿ ಪೂರಕ ಪರೀಕ್ಷೆ ಸೆ. 7ರಿಂದ 19ರವರೆಗೆ ನಡೆಯಲಿದೆ ಎಂದು ಪದವಿ ಪೂರ್ವ ಶಿಕ್ಷಣ ಇಲಾಖೆ ನಿರ್ದೇಶಕಿ ಎಂ. ಕನಗವಲ್ಲಿ ತಿಳಿಸಿದ್ದಾರೆ.

17ರಂದು ಮಹಾಲಯ ಅಮಾವಾಸ್ಯೆ ನಿಮಿತ್ತ ರಜೆ ಇರುವುದರಿಂದ ಅಂದು ನಿಗದಿಯಾಗಿದ್ದ ವಿಷಯದ ಪರೀಕ್ಷೆ ಮರುದಿನ ನಡೆಯಲಿದೆ.

ಪರಿಷ್ಕೃತ ವೇಳಾಪಟ್ಟಿ: 7ರಂದು ಬೆಳಿಗ್ಗೆ (10.15ರಿಂದ 1.30ರವರೆಗೆ) ಉರ್ದು, ಸಂಸ್ಕೃತ, ಮಧ್ಯಾಹ್ನ (2.15ರಿಂದ 5.30) ಮಾಹಿತಿ ತಂತ್ರಜ್ಞಾನ, ರಿಟೇಲ್‌, ಆಟೊಮೊಬೈಲ್‌, ಹೆಲ್ತ್ ಕೇರ್‌, ಬ್ಯೂಟಿ ಮತ್ತು ವೆಲ್‌ನೆಸ್‌, ಗೃಹ ವಿಜ್ಞಾನ (ಎನ್‌ಎಸ್‌ಕ್ಯೂಎಫ್‌), 8ರಂದು ಬೆಳಿಗ್ಗೆ ಇತಿಹಾಸ, ಸಂಖ್ಯಾಶಾಸ್ತ್ರ, ಜೀವವಿಜ್ಞಾನ, 9ರಂದು ಬೆಳಿಗ್ಗೆ ಹಿಂದಿ, ಮಧ್ಯಾಹ್ನ ತಮಿಳು, ತೆಲುಗು, ಮಲಯಾಳ, ಮರಾಠಿ, ಅರೆಬಿಕ್‌, ಫ್ರೆಂಚ್‌, 10ರಂದು ಬೆಳಿಗ್ಗೆ ಇಂಗ್ಲಿಷ್‌, 11ರಂದು ಬೆಳಿಗ್ಗೆ ಐಚ್ಛಿಕ ಕನ್ನಡ, ಎಲೆಕ್ಟ್ರಾನಿಕ್ಸ್‌, ಕಂಪ್ಯೂಟರ್‌ ಸೈನ್ಸ್‌, ಮಧ್ಯಾಹ್ನ ಕರ್ನಾಟಕ ಸಂಗೀತ, ಹಿಂದೂಸ್ಥಾನಿ ಸಂಗೀತ, ಭೂಗರ್ಭ ವಿಜ್ಞಾನ, 12ರಂದು ಬೆಳಿಗ್ಗೆ ಅರ್ಥಶಾಸ್ತ್ರ, ಭೌತವಿಜ್ಞಾನ ಪರೀಕ್ಷೆ ನಡೆಯಲಿದೆ.

ADVERTISEMENT

14ರಂದು ಬೆಳಿಗ್ಗೆ ತರ್ಕ ಶಾಸ್ತ್ರ, ವ್ಯವಹಾರ ಅಧ್ಯಯನ, ರಸಾಯನ ವಿಜ್ಞಾನ, ಶಿಕ್ಷಣ, 15ರಂದು ಬೆಳಿಗ್ಗೆ ಕನ್ನಡ, 16ರಂದು ಬೆಳಿಗ್ಗೆ ರಾಜ್ಯಶಾಸ್ತ್ರ, ಮೂಲಗಣಿತ, 18ರಂದುಸಮಾಜ ವಿಜ್ಞಾನ, ಲೆಕ್ಕಶಾಸ್ತ್ರ, ಗಣಿತ, 19ರಂದು ಬೆಳಿಗ್ಗೆ ಭೂಗೋಳ ವಿಜ್ಞಾನ, ಮಧ್ಯಾಹ್ನ ಮನೋವಿಜ್ಞಾನ ಪರೀಕ್ಷೆ ನಡೆಯಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.