ADVERTISEMENT

ಮಳೆ ಗಾಳಿಗೆ 30 ಟನ್‌ ದ್ರಾಕ್ಷಿ ಮಣ್ಣುಪಾಲು

ಬಾರಿ ಬೀರುಗಾಳಿಗೆ ಧರೆಗುರುಳಿದ ಎರಡು ಎಕರೆ ದ್ರಾಕ್ಷಿ ಪಡ

​ಪ್ರಜಾವಾಣಿ ವಾರ್ತೆ
Published 27 ಮಾರ್ಚ್ 2022, 17:50 IST
Last Updated 27 ಮಾರ್ಚ್ 2022, 17:50 IST
ತಿಕೋಟಾ ತಾಲ್ಲೂಕಿನ ಯತ್ನಾಳ ಗ್ರಾಮದ ರೈತ ಅನೀಲ ಶಂಕರ ದೇವಕಾತೆ ಎಂಬುವವರ ತೋಟದಲ್ಲಿ ಕಟಾವಿಗೆ ಬಂದ ದ್ರಾಕ್ಷಿ ಪಡ ಬೀರುಗಾಳಿಗೆ ಧರೆಗುರುಳಿರುವದು
ತಿಕೋಟಾ ತಾಲ್ಲೂಕಿನ ಯತ್ನಾಳ ಗ್ರಾಮದ ರೈತ ಅನೀಲ ಶಂಕರ ದೇವಕಾತೆ ಎಂಬುವವರ ತೋಟದಲ್ಲಿ ಕಟಾವಿಗೆ ಬಂದ ದ್ರಾಕ್ಷಿ ಪಡ ಬೀರುಗಾಳಿಗೆ ಧರೆಗುರುಳಿರುವದು   

ತಿಕೋಟಾ (ವಿಜಯಪುರ ಜಿಲ್ಲೆ): ತಾಲ್ಲೂಕಿನ ಯತ್ನಾಳ ಗ್ರಾಮದಲ್ಲಿ ಹಣ್ಣಾಗಿ ಕಟಾವಿಗೆ ಬಂದ ದ್ರಾಕ್ಷಿ ಪಡ ಶನಿವಾರ ಸುರಿದ ಭಾರಿ ಗಾಳಿ–ಮಳೆಗೆ ನೆಲಕ್ಕುರುಳಿದ್ದು, 30 ಟನ್‌ಗಳಷ್ಟು ಹಣ್ಣಾದ ದ್ರಾಕ್ಷಿ ಮಣ್ಣುಪಾಲಾಗಿವೆ.

ಅನೀಲ ಶಂಕರ ದೇವಕಾತೆ ಎಂಬ ರೈತರ ಈ ದ್ರಾಕ್ಷಿ ಪಡ ಹಾಳಾಗಿದೆ. ‘ಈ ವರ್ಷ ಉತ್ತಮ ಆದಾಯದ ನಿರೀಕ್ಷೆ ಇತ್ತು, ಕೈಗೆ ಬಂದ ತುತ್ತು ಬಾಯಿಗೆ ಬರದಂತಾಗಿದೆ’ ಎಂದು ಅವರು ಅಳಲು ತೋಡಿಕೊಂಡರು.

ಸ್ಥಳಕ್ಕಾಗಮಿಸಿದ ತಾಲ್ಲೂಕು ಸಹಾಯಕ ತೋಟಗಾರಿಕೆ ಅಧಿಕಾರಿ ಹಾಗೂ ಗ್ರಾಮ ಲೆಕ್ಕಾಧಿಕಾರಿ ಹಾನಿ ಪರಿಶೀಲನೆ ನಡೆಸಿ ಸರ್ಕಾರದಿಂದ ಪರಿಹಾರ ಕೊಡುವ ಭರವಸೆ ನೀಡಿದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.