ಆಲೂರು (ಹಾಸನ): ಮೀನು ಸಾಗಣೆ ಮಾಡುವ ಡಬ್ಬಿಗಳಲ್ಲಿ 4 ಟನ್ ಗೋಮಾಂಸ ತುಂಬಿಕೊಂಡು ಮಂಗಳೂರಿಗೆ ಸಾಗಿಸಲು ಸಜ್ಜಾಗಿದ್ದ ಏಳು ವಾಹನಗಳನ್ನು ಪೊಲೀಸರು ಭಾನು ವಾರ ವಶಪಡಿಸಿಕೊಂಡಿದ್ದು, ಇಬ್ಬರನ್ನು ಬಂಧಿಸಿದ್ದಾರೆ.
ಆಲೂರು ಅಪರಾಧ ವಿಭಾಗದ ಸಬ್ ಇನ್‌ಸ್ಪೆಕ್ಟರ್ ದಿನೇಶ್‍ಕುಮಾರ್ ಅವರು ಶನಿವಾರ ರಾತ್ರಿ ಗಸ್ತು ತಿರುಗುವ ಸಂದರ್ಭದಲ್ಲಿ ಸಿಕ್ಕ ಮಾಹಿತಿ ಆಧರಿಸಿ, ಇಲ್ಲಿನ ಪ್ರಕೃತಿ ನಗರದಲ್ಲಿ ಶೆಡ್ ಬಳಿ ತೆರಳಿದ್ದರು. ಆಗ, ಆರೋಪಿಗಳು ವಾಹನ ಬಿಟ್ಟು ಪರಾರಿಯಾಗಿದ್ದಾರೆ.
ಸಮೀಪದ ಪೊದೆಯಲ್ಲಿ ಅವಿತು ಕುಳಿತಿದ್ದ ಮುನ್ನಾ ಎಂಬುವವರನ್ನು ಬಂಧಿಸಿ, ವಿಚಾರಣೆಗೊಳಪಡಿಸಿದಾಗ ಗೋಮಾಂಸ ಸಾಗಣೆ ಪತ್ತೆಯಾಯಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.