ADVERTISEMENT

ಇಂದು ₹ 50 ಕೋಟಿ ಮೌಲ್ಯದ ಮಾದಕವಸ್ತು ನಾಶ: ಬೊಮ್ಮಾಯಿ

ಗೃಹ ಸಚಿವ ಬಸವರಾಜ ಬೊಮ್ಮಾಯಿ ಹೇಳಿಕೆ

​ಪ್ರಜಾವಾಣಿ ವಾರ್ತೆ
Published 25 ಜೂನ್ 2021, 20:47 IST
Last Updated 25 ಜೂನ್ 2021, 20:47 IST
ಬಸವರಾಜ ಬೊಮ್ಮಾಯಿ 
ಬಸವರಾಜ ಬೊಮ್ಮಾಯಿ    

ಬೆಂಗಳೂರು: 2020 ಮತ್ತು 2021ರಲ್ಲಿ ರಾಜ್ಯದ ಪೊಲೀಸರು ವಿವಿಧೆಡೆ ಕಾರ್ಯಾಚರಣೆ ನಡೆಸಿ ವಶಕ್ಕೆ ಪಡೆದಿರುವ ₹ 50.23ಕೋಟಿ ಮೌಲ್ಯದ ವಿವಿಧ ಮಾದಕವಸ್ತುಗಳನ್ನು ‘ಅಂತರರಾಷ್ಟ್ರೀಯ ಮಾದಕವಸ್ತು ವಿರೋಧಿ ದಿನ’ವಾದ ಶನಿವಾರ ನಾಶಪಡಿಸಲಾಗುವುದು ಎಂದು ಗೃಹ ಸಚಿವ ಬಸವರಾಜ ಬೊಮ್ಮಾಯಿ ತಿಳಿಸಿದರು.

ಮಾಧ್ಯಮ ಪ್ರತಿನಿಧಿಗಳ ಜತೆ ಶುಕ್ರವಾರ ಮಾತನಾಡಿದ ಅವರು, ‘23,829 ಕೆ.ಜಿ. ಗಾಂಜಾ, 34.4 ಕೆ.ಜಿ. ಪೊಪ್ಪಿ, 1 ಕೆ.ಜಿ. ಬ್ರೌನ್‌ ಷುಗರ್‌, 161.34 ಕೆ.ಜಿ. ಓಪಿಯಂ, 6.15 ಕೆ.ಜಿ. ಹಶೀಶ್‌, 5.2 ಕೆ.ಜಿ. ಚರಸ್‌, ಎಂಡಿಎಂಎ ಪುಡಿ, ಮಾತ್ರೆಗಳು, ಕೊಕೇನ್‌, ಎಲ್‌ಎಸ್‌ಡಿ ಹಾಳೆಗಳನ್ನು ಶನಿವಾರ ಏಕಕಾಲಕ್ಕೆ ನಾಶಪಡಿಸಲಾಗುವುದು’ ಎಂದರು.

‘ನಾನು ಪರೀಕ್ಷೆ ಬರೆದಿಲ್ಲ’: ‘ಮುಖ್ಯಮಂತ್ರಿ ಬದಲಾವಣೆ ಪರೀಕ್ಷೆ ಬರೆದಿದ್ದೇವೆ’ ಎಂಬ ಪ್ರವಾಸೋದ್ಯಮ ಸಚಿವ ಯೋಗೇಶ್ವರ್‌ ಹೇಳಿಕೆ ಕುರಿತು ಪ್ರತಿಕ್ರಿಯಿಸಿದ ಗೃಹ ಸಚಿವ ಬಸವರಾಜ ಬೊಮ್ಮಾಯಿ, ‘ನಾನು ಪರೀಕ್ಷೆ ಬರೆದಿಲ್ಲ. ಯಾವ ಫಲಿತಾಂಶವನ್ನೂ ನಿರೀಕ್ಷಿಸಿಲ್ಲ. ಯಾವುದರ ಆಕಾಂಕ್ಷಿಯೂ ಅಲ್ಲ’ ಎಂದು ಹೇಳಿದರು.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.