ಬೈಲಹೊಂಗಲ (ಬೆಳಗಾವಿ ಜಿಲ್ಲೆ): ಇಲ್ಲಿನ ಮೆಟಗುಡ್ಡ ಹತ್ತಿ ಮಿಲ್‌ನಲ್ಲಿ ಮಂಗಳವಾರ ಶಾರ್ಟ್ ಸರ್ಕಿಟ್‌ನಿಂದ ಅಗ್ನಿ ಅವಘಡ ಸಂಭವಿಸಿದ್ದು, ಅಪಾರ ಪ್ರಮಾಣದ ಹತ್ತಿ ಸುಟ್ಟು ಕರಕಲಾಗಿದೆ. ಯಂತ್ರೋಪಕರಣಗಳಿಗೂ ಹಾನಿ ಉಂಟಾಗಿದೆ.
ತೀವ್ರವಾಗಿದ್ದ ಜ್ವಾಲೆಯನ್ನು ನಂದಿಸಲು ಅಗ್ನಿಶಾಮಕ ದಳ ಸಿಬ್ಬಂದಿ ಹರಸಾಹಸ ಪಟ್ಟರು. ಈ ದೃಶ್ಯ ನೋಡಲೆಂದು ಜನರು ಅಪಾರ ಸಂಖ್ಯೆಯಲ್ಲಿ ನೆರೆದಿದ್ದರು. ಇವರನ್ನು ಚದುರಿಸಲು ಪೊಲೀಸರು ಲಘು ಲಾಠಿ ಪ್ರಹಾರ ನಡೆಸಿದರು.
ಈ ಮಿಲ್, ಮುತ್ತುರಾಜ ಮೆಟಗುಡ್ಡ ಅವರಿಗೆ ಸೇರಿದ್ದು, ಗುತ್ತಿಗೆ ಆಧಾರ ಮೇಲೆ ಸೈಯ್ಯದ್ ಸುಭಾನಿ ಕುಸಲಾಪುರ ನಡೆಸುತ್ತಿದ್ದರು. ಹೆಚ್ಚಿನ ರೈತರು ಹತ್ತಿ ತಂದು ಮಿಲ್‌ನಲ್ಲಿ ಶೇಖರಿಸಿ ಇಟ್ಟಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.