ADVERTISEMENT

ಹಲ್ಲೆಗೊಳಗಾಗಿದ್ದ ಅಹಮ್ಮದ್ ಬಶೀರ್ ಸಾವು

​ಪ್ರಜಾವಾಣಿ ವಾರ್ತೆ
Published 7 ಜನವರಿ 2018, 3:46 IST
Last Updated 7 ಜನವರಿ 2018, 3:46 IST
ಹಲ್ಲೆಗೊಳಗಾಗಿದ್ದ ಅಹಮ್ಮದ್ ಬಶೀರ್ ಸಾವು
ಹಲ್ಲೆಗೊಳಗಾಗಿದ್ದ ಅಹಮ್ಮದ್ ಬಶೀರ್ ಸಾವು   

ಮಂಗಳೂರು: ನಗರದ ಕೊಟ್ಟಾರ ಚೌಕಿ ಬಳಿ ಬುಧವಾರ ರಾತ್ರಿ ಹಲ್ಲೆಗೊಳಗಾಗಿದ್ದ ಆಕಾಶಭವನ ನಿವಾಸಿ ಅಹಮ್ಮದ್ ಬಶೀರ್ ಇಲ್ಲಿನ ಎ.ಜೆ. ಆಸ್ಪತ್ರೆಯಲ್ಲಿ ಭಾನುವಾರ ಬೆಳಿಗ್ಗೆ ಮೃತಪಟ್ಟಿದ್ದಾರೆ.

ಬಶೀರ್ ಅವರಿಗೆ ಹಲವು ಶಸ್ತ್ರಚಿಕಿತ್ಸೆ ನಡೆಸಲಾಗಿತ್ತು. ತೀವ್ರನಿಗಾ ಘಟಕದಲ್ಲಿದ್ದ ಅವರು ಬೆಳಿಗ್ಗೆ 8.05ಕ್ಕೆ ನಿಧನರಾದರು ಎಂದು ಅವರ ಕುಟುಂಬದ ಮೂಲಗಳು ತಿಳಿಸಿವೆ.

ಕಾಟಿಪಳ್ಳದಲ್ಲಿ ದೀಪಕ್ ರಾವ್ ಕೊಲೆ ನಡೆದ ಬಳಿಕ ಪ್ರತೀಕಾರವಾಗಿ ನಾಲ್ವರು ಬಶೀರ್ ಮೇಲೆ ತಲವಾರುಗಳಿಂದ ಹಲ್ಲೆ ನಡೆಸಿದ್ದರು. ತೀವ್ರವಾಗಿ ಗಾಯಗೊಂಡಿದ್ದ ಅವರನ್ನು ಎ.ಜೆ. ಆಸ್ಪತ್ರೆಗೆ ದಾಖಲಿಸಲಾಗಿತ್ತು.

 ಬಶೀರ್ ಮೇಲೆ‌ ದಾಳಿ‌ ನಡೆಸಿದ್ದ ಪಡೀಲ್ ನಿವಾಸಿಗಳಾದ ಧನುಷ್, ಕಿಶನ್, ಕಾಸರಗೋಡು ಜಿಲ್ಲೆಯ ಶ್ರೀಜಿತ್ ಮತ್ತು ಸಂದೇಶ್ ಕೋಟ್ಯಾನ್ ಎಂಬ ಯುವಕರನ್ನು ನಗರ ಅಪರಾಧ ಘಟಕದ ಪೊಲೀಸರು ಶನಿವಾರ ಬಂಧಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.