ADVERTISEMENT

ಸಾಮಾಜಿಕ ಮಾಧ್ಯಮಗಳ ‘ಫೇಕ್‌ ಅಕೌಂಟ್‌’ ಕುರಿತು ರಮ್ಯಾ ಪಾಠ?

​ಪ್ರಜಾವಾಣಿ ವಾರ್ತೆ
Published 7 ಫೆಬ್ರುವರಿ 2018, 12:48 IST
Last Updated 7 ಫೆಬ್ರುವರಿ 2018, 12:48 IST
ಸಾಮಾಜಿಕ ಮಾಧ್ಯಮಗಳ ‘ಫೇಕ್‌ ಅಕೌಂಟ್‌’ ಕುರಿತು ರಮ್ಯಾ ಪಾಠ?
ಸಾಮಾಜಿಕ ಮಾಧ್ಯಮಗಳ ‘ಫೇಕ್‌ ಅಕೌಂಟ್‌’ ಕುರಿತು ರಮ್ಯಾ ಪಾಠ?   

ಬೆಂಗಳೂರು: ಕಾಂಗ್ರೆಸ್‌ನ ಸಾಮಾಜಿಕ ಮಾಧ್ಯಮ ಹಾಗೂ ಸಂವಹನ ಘಟಕದ ಮುಖ್ಯಸ್ಥೆ ರಮ್ಯಾ ಫೇಸ್‌ಬುಕ್‌, ಟ್ವಿಟರ್‌ ‘ಫೇಕ್‌’ ಅಕೌಂಟ್‌ ಕುರಿತು ಮಾತನಾಡಿರುವ ವಿಡಿಯೊ ವೈರಲ್‌ ಆಗಿದೆ.

‘ಒಂದೇ ಹೆಸರಿನಲ್ಲಿ ಎರಡು ಮೂರು ಅಕೌಂಟ್‌ಗಳನ್ನು ಹೊಂದಬಹುದು. ಅದರಲ್ಲಿ ತಪ್ಪಿಲ್ಲ...ಒಂದು ನಿಮ್ಮ ಹೆಸರಿನಲ್ಲಿ ಇನ್ನೊಂದಿ ನಿಮ್ಮ...’ ಹೀಗೆ ರಮ್ಯಾ ತಮ್ಮ ಪಕ್ಷದ ಕಾರ್ಯಕರ್ತರಿಗೆ ಸಾಮಾಜಿಕ ಮಾಧ್ಯಮಗಳ ನಿರ್ವಹಣೆ ಕುರಿತು ನೀಡಿರುವ ಸಲಹೆ ಈ ವಿಡಿಯೊದಲ್ಲಿ ದಾಖಲಾಗಿದೆ.

ಟ್ವಿಟರ್‌ನಲ್ಲಿ ವೈರಲ್‌ ಆಗಿರುವ ಈ ವಿಡಿಯೊ ಅನ್ನು ನಟ ಜಗ್ಗೇಶ್‌,  ಬಿಜೆಪಿ ಮಹಿಳಾ ಮೋರ್ಚಾ ಉಪಾಧ್ಯಕ್ಷೆ ಶಿಲ್ಪಾ ಗಣೇಶ್‌ ಸೇರಿ ಅನೇಕರು ಮರು ಟ್ವೀಟಿಸಿ, ‘ಸುಳ್ಳಿಗೂ ಕಾಂಗ್ರೆಸ್‌ಗೂ ಅವಿನಾಭಾವ ಸಂಬಂಧ’ ಎಂದು ಟೀಕಿಸಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.