ADVERTISEMENT

ನಕ್ಸಲರಿಗಾಗಿ ಮುಂದುವರಿದ ಶೋಧ

​ಪ್ರಜಾವಾಣಿ ವಾರ್ತೆ
Published 21 ಫೆಬ್ರುವರಿ 2018, 19:30 IST
Last Updated 21 ಫೆಬ್ರುವರಿ 2018, 19:30 IST

ನಾಪೋಕ್ಲು: ಕೊಡಗು ಜಿಲ್ಲೆಯಲ್ಲಿ ಹದಿನೈದು ದಿನಗಳ ಅಂತರದಲ್ಲಿ ಎರಡನೇ ಬಾರಿಗೆ ಶಂಕಿತ ನಕ್ಸಲ್‌ ತಂಡವು ಪ್ರತ್ಯಕ್ಷವಾಗಿದ್ದು, ಬುಧವಾರವೂ ನಕ್ಸಲ್‌ ನಿಗ್ರಹ ಪಡೆಯ ಸಿಬ್ಬಂದಿ ಶೋಧ ನಡೆಸಿದರು.

ಕುಂಜಿಲ– ಕಕ್ಕಬ್ಬೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ನಾಲಡಿ, ತಡಿಯಂಡ ಮೋಳ್‌ ವ್ಯಾಪ್ತಿಯ ಅರಣ್ಯ ಪ್ರದೇಶದಲ್ಲಿ ಶೋಧ ನಡೆಸಿದರು ಸುಳಿವು ಲಭಿಸಿಲ್ಲ.

ನಾಲಡಿಯ ಬಲ್ಲಚಂಡ ಮುತ್ತಣ್ಣ ಅವರ ಕಾಫಿ ತೋಟದ ಲೈನ್‌ಮನೆಗೆ ಶಸ್ತ್ರಸಜ್ಜಿತ ಮೂವರು ಪುರುಷರು ಬಂದು ಮೇಸ್ತ್ರಿ ಪೆಮ್ಮಯ್ಯ ಅವರಿಂದ ಅಡುಗೆ ಸಾಮಗ್ರಿ ಸಂಗ್ರಹಿಸಿ ಮರಳಿದ್ದರು.

ADVERTISEMENT

‘ಕೇಂದ್ರ, ರಾಜ್ಯ ಸರ್ಕಾರದ ಏನೆಲ್ಲ ಸೌಲಭ್ಯಗಳು ನಿಮಗೆ ಸಿಕ್ಕಿವೆ? ನೋಟು ಅಮಾನ್ಯದಿಂದ ಆದ ತೊಂದರೆ ಏನೆಂದು ಪ್ರಶ್ನಿಸಿದ್ದರು. ತಾವು ಶೋಷಿತರ ಪರ ಹೋರಾಟಗಾರರೆಂದು ಹೇಳಿಕೊಂಡರು’ ಎಂದು ಕಾರ್ಮಿಕರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.