ADVERTISEMENT

ಆನ್ಲೈನ್ ತರಗತಿ ಕೇಳುತ್ತ ಜೋಕಾಲಿ ಉರುಳಿಗೆ ಸಿಲುಕಿ ಬಾಲಕ ಸಾವು

​ಪ್ರಜಾವಾಣಿ ವಾರ್ತೆ
Published 28 ಆಗಸ್ಟ್ 2020, 15:12 IST
Last Updated 28 ಆಗಸ್ಟ್ 2020, 15:12 IST
   

ದೊಡ್ಡಬಳ್ಳಾಪುರ:ಸೀರೆ ಕಟ್ಟಿರುವ ಜೋಳಿಗೆಯಲ್ಲಿ ಕುಳಿತು ಪಾಠ ಕೇಳುತ್ತಿದ್ದ ಬಾಲಕ,ಜೋಳಿಗೆ ಉರುಳು ಬಿದ್ದು ಸಾವನಪ್ಪಿರುವ ಘಟನೆ ದರ್ಗಾಜೋಗಹಳ್ಳಿಯಲ್ಲಿ ನಡೆದಿದೆ.

ದರ್ಗಾಜೋಗಳ್ಳಿಯ ಮಂಜುನಾಥ್ ಅವರ ಪುತ್ರ ವಿಶ್ವಾಸ್(10)ಮೃತ ಬಾಲಕ. ಕೊಡಿಗೆಹಳ್ಳಿಯ ಸಹ್ಯಾದ್ರಿ ಶಾಲೆಯಲ್ಲಿ 5ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದ. ವಿಶ್ವಾಸ್ ಹೊರಗಡೆ ಶಬ್ದ ಎಂದು ಕೋಣೆಗೆ ಹೋಗಿ ಬಾಗಿಲು ಹಾಕಿಕೊಂಡಿದ್ದ ಹಾಗೂಎರಡು ವರ್ಷದ ಮತ್ತೊಂದು ಮಗುವನ್ನು ಮಲಗಿಸಲು ಕಟ್ಟಲಾಗಿದ್ದ ಜೋಳಿಗೆಯಲ್ಲಿ ಕುಳಿತು ಆನ್ಲೈನ್ ಕ್ಲಾಸ್ ಕೇಳುತ್ತಿದ್ದ.

ಈ ವೇಳೆ ಜೋಳಿಗೆ ಉರುಳು ಕುತ್ತಿಗೆಗೆ ಸಿಲುಕಿ ಮೃತಪಟ್ಟಿದ್ದಾನೆ. ನಂತರ ಆನ್ಲೈನ್ ತರಗತಿ ಮುಗಿದರೂ ಮಗ ಹೊರಗಡೆ ಬಾರದಿರುವುದನ್ನು ಕಂಡ ಪೋಷಕರು, ಕೋಣೆ ಬಾಗಿಲು ಹೊಡೆದು ನೋಡಿದಾಗ ಬಾಲಕ ಮೃತಪಟ್ಟಿರುವುದು ಕಂಡು ಬಂದಿದೆ.ದೊಡ್ಡಬಳ್ಳಾಪುರ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ADVERTISEMENT

ಎಚ್ಚರ ವಹಿಸಿ: ಮಕ್ಕಳಿಗೆ ಮೊಬೈಲ್ ನೀಡಿದಾಗ ಪೋಷಕರು ಮಕ್ಕಳ ಚಲನವಲನಗಳನ್ನು ಗಮನಿಸುವ ಮೂಲಕ ಜೊತೆಯಲ್ಲಿಯೇ ಇರಬೇಕಿದೆ. ಇಲ್ಲವಾದರೆ ಇಂತಹ ದುರ್ಘಟನೆಗಳು ಸಂಭವಿಸುತ್ತವೆ. ಪೋಷಕರು ಮಕ್ಕಳ ಬಗ್ಗೆ ಎಚ್ಚರ ವಹಿಸಬೇಕಿದೆ ಎಂದು ಶಿಕ್ಷಕ ಕೋದಂಡರಾಮ ಮನವಿ ಮಾಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.