ADVERTISEMENT

ಭಾರತ್‌ ಜೋಡೊ ಪಾದಯಾತ್ರೆಯಲ್ಲಿ ಪ್ರತ್ಯಕ್ಷರಾದ ಚಿತ್ರನಟಿ ರಮ್ಯಾ

​ಪ್ರಜಾವಾಣಿ ವಾರ್ತೆ
Published 22 ಅಕ್ಟೋಬರ್ 2022, 14:23 IST
Last Updated 22 ಅಕ್ಟೋಬರ್ 2022, 14:23 IST
ಪಾದಯಾತ್ರೆಯಲ್ಲಿ ಚಿತ್ರನಟಿ ರಮ್ಯಾ
ಪಾದಯಾತ್ರೆಯಲ್ಲಿ ಚಿತ್ರನಟಿ ರಮ್ಯಾ   

ರಾಯಚೂರು: ರಾಜ್ಯದಲ್ಲಿ ಕೊನೆಯ ದಿನ ರಾಯಚೂರು ನಗರದಲ್ಲಿ ಶನಿವಾರ ನಡೆದ ಭಾರತ್‌ ಜೋಡೊ ಪಾದಯಾತ್ರೆಯಲ್ಲಿ ಚಲನಚಿತ್ರ ನಟಿ ರಮ್ಯಾ ಕೂಡಾ ಭಾಗವಹಿಸಿದ್ದರು.

ಮಂತ್ರಾಲಯ ಮಾರ್ಗದ ಐಬಿ ಕಾಲೋನಿಯಿಂದ ಸಾರ್ವಜನಿಕ ಸಭೆ ಆಯೋಜಿಸಿದ್ದ ವಾಲ್ಕಟ್‌ ಮೈದಾನದವರೆಗೂ ರಾಹುಲ್‌ಗಾಂಧಿ ಅವರೊಂದಿಗೆ ಮಾತನಾಡುತ್ತಲೇ ಪಾದಯಾತ್ರೆ ಮಾಡಿದರು.

ಪಾದಯಾತ್ರೆಯಲ್ಲಿ ರಮ್ಯಾ ಅವರು ಸೇರಿಕೊಳ್ಳುತ್ತಿದ್ದಂತೆ ಜನರು ಗುಂಪಾಗುವುದು ಹೆಚ್ಚಳವಾಯಿತು. ಎಂದಿನಂತೆ ರಾಹುಲ್‌ಗಾಂಧಿ ಅವರು ರಸ್ತೆ ಎರಡು ಅಂಚಿನಲ್ಲಿ ನಿಂತಿದ್ದ ಜನರತ್ತ ಕೈಬೀಸಿಕೊಂಡು ಮುನ್ನಡೆದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.