ADVERTISEMENT

ಕೋರ್ಸ್‌ಗಳಿಗೆ ಪ್ರವೇಶ: ಕಾಲೇಜು ಆಯ್ಕೆ ಮಾಡಿಕೊಂಡ 16 ಸಾವಿರ ವಿದ್ಯಾರ್ಥಿಗಳು

ವೈದ್ಯಕೀಯ, ಎಂಜಿನಿಯರಿಂಗ್‌ ಕಾಲೇಜುಗಳ ಪ್ರವೇಶ

​ಪ್ರಜಾವಾಣಿ ವಾರ್ತೆ
Published 31 ಆಗಸ್ಟ್ 2024, 19:13 IST
Last Updated 31 ಆಗಸ್ಟ್ 2024, 19:13 IST
<div class="paragraphs"><p>ಪ್ರಾತಿನಿಧಿಕ ಚಿತ್ರ&nbsp;</p></div>

ಪ್ರಾತಿನಿಧಿಕ ಚಿತ್ರ 

   

ಬೆಂಗಳೂರು: ವೈದ್ಯಕೀಯ, ಎಂಜಿನಿಯರಿಂಗ್‌ ಸೇರಿದಂತೆ ವಿವಿಧ ವೃತ್ತಿಪರ ಕೋರ್ಸ್‌ಗಳಿಗೆ ಪ್ರವೇಶ ಪ್ರಕ್ರಿಯೆ ಶನಿವಾರ ಆರಂಭವಾಗಿದ್ದು, ಮೊದಲ ದಿನವೇ 16 ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳು ಕೋರ್ಸ್‌ ಹಾಗೂ ಕಾಲೇಜುಗಳನ್ನು ಆಯ್ಕೆ ಮಾಡಿಕೊಂಡಿದ್ದಾರೆ.

ಚಲನ್‌ ಡೌನ್‌ಲೋಡ್‌ ಮಾಡಿಕೊಂಡು ಶುಲ್ಕ ಪಾವತಿಸುವ ವಿಧಾನದ ಜೊತೆಗೆ ಇದೇ ಮೊದಲ ಬಾರಿ ಇಂಟರ್‌ನೆಟ್‌ ಬ್ಯಾಂಕಿಂಗ್, ಡೆಬಿಟ್/ಕೆಡಿಟ್ ಕಾರ್ಡ್‌ಗಳ ಮೂಲಕ ಶುಲ್ಕ ಪಾವತಿಗೆ ಅವಕಾಶ ಕಲ್ಪಿಸಲಾಗಿತ್ತು. ಈ ಸೌಲಭ್ಯ ಬಳಸಿಕೊಂಡು ಮೂರು ಸಾವಿರಕ್ಕೂ ಹೆಚ್ಚು ಮಂದಿ ಶುಲ್ಕ ಪಾವತಿ ಮಾಡಿ, ಪ್ರವೇಶ ಪತ್ರ ಡೌನ್‌ಲೋಡ್‌ ಮಾಡಿಕೊಂಡಿದ್ದಾರೆ.

ADVERTISEMENT

ಎಚ್‌ಡಿಎಫ್‌ಸಿ ಸೇರಿ ಕೆಲ ಬ್ಯಾಂಕ್‌ಗಳು ತನ್ನ ಗ್ರಾಹಕರಿಗೆ ಒಮ್ಮೆಗೇ ಗರಿಷ್ಠ ₹50 ಲಕ್ಷ  ವರ್ಗಾಯಿಸಲು ಅವಕಾಶ ನೀಡಿವೆ. ವೈದ್ಯಕೀಯ ಕೋರ್ಸ್‌ ಪ್ರವೇಶ ಪಡೆದ ಕೆಲವರು‌ ತಮ್ಮ ಗರಿಷ್ಠ ಮೊತ್ತದ ಶುಲ್ಕ‌ ₹6.09 ಲಕ್ಷ ಮೊತ್ತವನ್ನು ಇಂಟರ್‌ನೆಟ್‌ ಬ್ಯಾಂಕಿಂಗ್‌ ಮೂಲಕ ಪಾವತಿ‌ಸಿದ್ದಾರೆ. 

ಹಣಪಾವತಿಗೆ ಸರ್ವರ್ ಸಮಸ್ಯೆ:

ಕಾಲೇಜುಗಳ ಆಯ್ಕೆಯ ನಂತರ ಶುಲ್ಕ ಪಾವತಿಸಲು ಹೆಚ್ಚಿನ ವಿದ್ಯಾರ್ಥಿಗಳು ಒಮ್ಮೆಗೇ ಪ್ರಯತ್ನ ನಡೆಸಿದ್ದರಿಂದ ಸರ್ವರ್‌ ನಿಧಾನವಾಗಿ, ಸಮಸ್ಯೆಯಾಯಿತು. ಸಮಸ್ಯೆಯನ್ನು ತಾಂತ್ರಿಕ ಸಿಬ್ಬಂದಿ ಸರಿಪಡಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.