ADVERTISEMENT

ಪ್ರಕೃತಿಗೆ ವಿರುದ್ಧ ವೈಜ್ಞಾನಿಕ ಚಿಂತನೆ ಬೇಡ

ಇಬ್ಬರು ನೊಬೆಲ್‌ ಪುರಸ್ಕೃತ ವಿಜ್ಞಾನಿಗಳ ಸಲಹೆ

​ಪ್ರಜಾವಾಣಿ ವಾರ್ತೆ
Published 4 ಜನವರಿ 2020, 17:34 IST
Last Updated 4 ಜನವರಿ 2020, 17:34 IST
ಸ್ಟೀಫನ್‌ ಡಬ್ಲ್ಯು.ಹೆಲ್‌
ಸ್ಟೀಫನ್‌ ಡಬ್ಲ್ಯು.ಹೆಲ್‌   

ಬೆಂಗಳೂರು: ‘ವೈಜ್ಞಾನಿಕ ಆವಿಷ್ಕಾರಗಳು ಏನಿದ್ದರೂ ನಮ್ಮ ಪರಿಸರ, ಪ್ರಕೃತಿಗೆ ಪೂರಕವಾಗಿಯೇ ಇರಬೇಕು. ವಿರುದ್ಧವಾಗಿದ್ದರೆ ಅದು ನಿರೀಕ್ಷಿತ ಫಲ ನೀಡದು, ಬಹುಕಾಲ ಉಳಿಯದು’ ಎಂದು ರಸಾಯನ ವಿಜ್ಞಾನದಲ್ಲಿ ನೊಬೆಲ್‌ ಪುರಸ್ಕೃತೆಜರ್ಮನಿಯ ಸ್ಟೀಫನ್‌ ಡಬ್ಲ್ಯು.ಹೆಲ್‌ ಮತ್ತು ಇಸ್ರೇಲ್‌ನ ಪ್ರೊ.ಅದಾ ಯೊನಾಥ್‌ ಹೇಳಿದರು.

ಇಲ್ಲಿನಜಿಕೆವಿಕೆಯಲ್ಲಿ ನಡೆಯುತ್ತಿರುವ 107ನೇ ವಿಜ್ಞಾನ ಕಾಂಗ್ರೆಸ್‌ನಲ್ಲಿ ಪಾಲ್ಗೊಂಡಿರುವ ಅವರು ಶನಿವಾರ ಸುದ್ದಿಗೋಷ್ಠಿಯಲ್ಲಿ ತಮ್ಮ ಅನಿಸಿಕೆ ಹಂಚಿಕೊಂಡರು.

‘ಸಂಶೋಧನೆಗೆ ಮುಂದುವರಿದ ದೇಶ, ಮುಂದುವರಿಯುತ್ತಿರುವ ದೇಶ ಎಂಬುದಿಲ್ಲ. ಆದರೆ ಕುತೂಹಲ ಬೇಕಷ್ಟೇ. ಇತರರನ್ನು ಅನುಕರಿಸದೆ ನಮ್ಮ ನೈಜತೆ ಅಥವಾ ಸ್ವಂತಿಕೆಯನ್ನು ಪಾಲಿಸಬೇಕಷ್ಟೇ. ಆಗ ಅದು ಸಣ್ಣ ಸಂಶೋಧನೆಯಾದರೂ ಬಹಳ ಪರಿಣಾಮ ಬೀರುತ್ತದೆ. ಕೆಲವೊಮ್ಮೆ ಅದುವೇ ನೊಬೆಲ್‌ ಪ್ರಶಸ್ತಿಗೂ ದಾರಿ ಮಾಡಿಕೊಡಬಹುದು’ ಎಂದು ಇಬ್ಬರೂ ತಮ್ಮ ಅನುಭವದ ಆಧಾರದಲ್ಲಿ ಹೇಳಿದರು.‘ಯಹೂದಿಗಳು ಜಗತ್ತಿನಲ್ಲಿ ಬಹಳ ನೋವು ಉಂಡವರು. ಆದರೆ ಜ್ಞಾನವನ್ನು ಅವರು ಬಳಸಿಕೊಂಡಿದ್ದರಿಂದ ದೇಶದ ಕೆಲವು ವಿಶ್ವವಿದ್ಯಾಲಯಗಳು ಜಗತ್ತಿನ ಶ್ರೇಷ್ಠ ಶಿಕ್ಷಣ ಸಂಸ್ಥೆಗಳಾಗಿ ರೂಪುಗೊಂಡವು’ ಎಂದು ಅದಾ ಯೊನಾಥ್‌ ಹೇಳಿದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.