ADVERTISEMENT

ಏಮ್ಸ್‌ ಪ್ರವೇಶ ಪರೀಕ್ಷೆ: ದಿವ್ಯಾಗೆ ಪ್ರಥಮ ರ‍್ಯಾಂಕ್‌

​ಪ್ರಜಾವಾಣಿ ವಾರ್ತೆ
Published 6 ಡಿಸೆಂಬರ್ 2020, 19:31 IST
Last Updated 6 ಡಿಸೆಂಬರ್ 2020, 19:31 IST
ದಿವ್ಯಾ ಹಿರೊಳ್ಳಿ
ದಿವ್ಯಾ ಹಿರೊಳ್ಳಿ   

ವಿಜಯಪುರ: ನವದೆಹಲಿಯ ಏಮ್ಸ್(AIIMS)‌ ಅಖಿಲ ಭಾರತ ಮಟ್ಟದಲ್ಲಿ ಪ್ರವೇಶ ಪರೀಕ್ಷೆಯ ಫಲಿತಾಂಶ ಭಾನುವಾರ ಪ್ರಕಟವಾಗಿದ್ದು, ‘ಡಿಎಂ–ಜನರಲ್‌ ಕ್ರಿಟಿಕಲ್‌ ಕೇರ್‌ ಮೆಡಿಸಿನ್‌’ ವಿಭಾಗದಲ್ಲಿ ವಿಜಯಪುರದ ವೈದ್ಯಕೀಯ ವಿದ್ಯಾರ್ಥಿನಿ ದಿವ್ಯಾ ಅರವಿಂದ ಹಿರೊಳ್ಳಿ ಶೇ 67.08 ಅಂಕಗಳೊಂದಿಗೆ ಪ್ರಥಮ ರ‍್ಯಾಂಕ್‌ ಪಡಿದಿದ್ದಾರೆ.

ಈ ಕುರಿತು ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದ ದಿವ್ಯಾ, ‘ನಿರೀಕ್ಷೆಯಂತೆ ರ‍್ಯಾಂಕ್‌ ಬಂದಿದ್ದು ಖುಷಿಯನ್ನು ಹೆಚ್ಚಿಸಿದೆ. ಮೂರು ವರ್ಷಗಳ ಈ ಕೋರ್ಸ್‌ ಸಂಪೂರ್ಣ ಉಚಿತ. ಭವಿಷ್ಯದಲ್ಲಿ ‘ಕ್ರಿಟಿಕಲ್‌ ಕೇರ್‌’ನಲ್ಲಿ ಹೆಚ್ಚಿನ ಸಾಧನೆ ಮಾಡಬೇಕೆಂದಿದ್ದೇನೆ’ ಎಂದು ಹೇಳಿದರು.

ವಿಜಯಪುರ ಜಿಲ್ಲಾ ಸೆಷನ್ಸ್ ಕೋರ್ಟ್‌ನಲ್ಲಿ ವಕೀಲ ಅರವಿಂದ ಹಿರೊಳ್ಳಿ ಅವರ ಪುತ್ರಿಯಾಗಿರುವ ಅವರು, ಬಿಎಲ್‌ಡಿಇ ವೈದ್ಯಕೀಯ ಮಹಾವಿದ್ಯಾಲಯದಲ್ಲಿ ವೈದ್ಯಕೀಯ ಪದವಿ(2012), ಹುಬ್ಬಳ್ಳಿ
ಕಿಮ್ಸ್‌ನಲ್ಲಿ ಎಂಡಿ(2016), ಪುದುಚೇರಿಯ ಜಿಪ್‌ಮೇರ್‌(JIPMER)ನಲ್ಲಿ ಕ್ರಿಟಿಕಲ್‌ ಕೇರ್‌ ಹಾಗೂ ಬೆಂಗಳೂರಿನ ನಿಮ್ಹಾನ್ಸ್‌ನಲ್ಲಿ ನಿರೊ ಕ್ರಿಟಿಕಲ್‌ ಕೇರ್‌ ಫೆಲೊಶಿಪ್ ಪ‌ಡೆದುಕೊಂಡಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.