ADVERTISEMENT

ರಾಯಚೂರಿಗೆ ಏಮ್ಸ್: ಪ್ರಧಾನಿಗೆ ಮನವಿ

​ಪ್ರಜಾವಾಣಿ ವಾರ್ತೆ
Published 26 ಫೆಬ್ರುವರಿ 2024, 15:51 IST
Last Updated 26 ಫೆಬ್ರುವರಿ 2024, 15:51 IST
<div class="paragraphs"><p>ಏಮ್ಸ್ ಹೋರಾಟ ಸಮಿತಿ</p></div>

ಏಮ್ಸ್ ಹೋರಾಟ ಸಮಿತಿ

   

ನವದೆಹಲಿ: ರಾಯಚೂರಿನಲ್ಲಿ ಏಮ್ಸ್‌ ಸ್ಥಾಪಿಸಬೇಕು ಎಂದು ಒತ್ತಾಯಿಸಿ ರಾಯಚೂರು ಜಿಲ್ಲಾ ಏಮ್ಸ್‌ ಹೋರಾಟ ಸಮಿತಿಯ ಸದಸ್ಯರು ಪ್ರಧಾನಿ ಹಾಗೂ ಕೇಂದ್ರ ಗೃಹ ಸಚಿವರಿಗೆ ಮನವಿ ಪತ್ರ ಸಲ್ಲಿಸಿದರು. 

‘ಈ ಹಿಂದೆ ರಾಯಚೂರಿಗೆ ಐಐಟಿ ಮಂಜೂರಾಗಿತ್ತು. ಕೆಲವು ಜನಪ್ರತಿನಿಧಿಗಳ ಷಡ್ಯಂತ್ರದಿಂದಾಗಿ ಅದು ಧಾರವಾಡಕ್ಕೆ ಸ್ಥಳಾಂತರಗೊಂಡಿತು. ರಾಯಚೂರು ಹಿಂದುಳಿದ ಜಿಲ್ಲೆ. ಏಮ್ಸ್‌ ಸ್ಥಾಪನೆಗೆ ಆಗ್ರಹಿಸಿ 655 ದಿನಗಳಿಂದ ಹೋರಾಟ ನಡೆಯುತ್ತಿದೆ. ಜಿಲ್ಲೆಯಲ್ಲಿ ಏಮ್ಸ್ ಸ್ಥಾಪನೆಗೆ ಒತ್ತಾಯಿಸಿ ಮುಖ್ಯಮಂತ್ರಿ ಸಿದ್ದರಾಮಯ್ಯ ಎರಡು ಬಾರಿ ಪತ್ರ ಬರೆದಿದ್ದಾರೆ. ಆದರೆ, ಈ ಸಲ ಬಜೆಟ್‌ನಲ್ಲಿ ಈ ಬಗ್ಗೆ ‍ಪ್ರಸ್ತಾಪಿಸಿಲ್ಲ. ಲೋಕಸಭಾ ಚುನಾವಣೆಯ ನೀತಿಸಂಹಿತೆ ಪ್ರಕಟವಾಗುವ ಮುನ್ನ ಜಿಲ್ಲೆಗೆ ಏಮ್ಸ್‌ ಮಂಜೂರು ಮಾಡಬೇಕು’ ಎಂದು ಹೋರಾಟ ಸಮಿತಿಯ ಪ್ರಧಾನ ಸಂಚಾಲಕ ಬಸವರಾಜ ಕಳಸ ಮನವಿಯಲ್ಲಿ ಆಗ್ರಹಿಸಿದ್ದಾರೆ. 

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.