ಅಜಯ್ ಸೇಠ್
ಪ್ರಜಾವಾಣಿ ಚಿತ್ರ
ಬೆಂಗಳೂರು: ಕರ್ನಾಟಕ ಕೇಡರ್‌ನ ಹಿರಿಯ ಐಐಎಸ್ ಅಧಿಕಾರಿ ಅಜಯ್ ಸೇಠ್ ಅವರಿಗೆ ಕೇಂದ್ರ ಸರ್ಕಾರದಲ್ಲಿ ಉನ್ನತ ಹುದ್ದೆ ದೊರೆತಿದೆ.
ಕೇಂದ್ರ ಹಣಕಾಸು ಸಚಿವಾಲಯದ ಕಾರ್ಯದರ್ಶಿಯಾಗಿ ಹಾಗೂ ಕಂದಾಯ ಕಾರ್ಯದರ್ಶಿಯಾಗಿ ಅಜಯ್ ಸೇಠ್ ನಿಯುಕ್ತಿಗೊಂಡಿದ್ದಾರೆ. ಇದಕ್ಕೂ ಮೊದಲು ಅವರು ಹಣಕಾಸು ಸಚಿವಾಲಯದ ‘ಆರ್ಥಿಕ ವ್ಯವಹಾರಗಳ ಇಲಾಖೆ’ಯ ಕಾರ್ಯದರ್ಶಿಯಾಗಿ 2021ರ ಏಪ್ರಿಲ್‌ನಿಂದ ಕಾರ್ಯನಿರ್ವಹಿಸುತ್ತಿದ್ದರು.
ಕೇಂದ್ರ ಹಣಕಾಸು ಸಚಿವಾಲಯದ ಕಾರ್ಯದರ್ಶಿಯಾಗಿದ್ದ ತುಹಿನ್ ಕಾಂತ್ ಪಾಂಡೆ ಅವರು ಸೆಬಿ ಅಧ್ಯಕ್ಷ ಸ್ಥಾನಕ್ಕೆ ನೇಮಕವಾಗಿದ್ದರು. ಅವರ ಸ್ಥಾನವನ್ನು ಅಜಯ್ ಸೇಠ್ ಅಲಂಕರಿಸಿದ್ದಾರೆ.
ಐಎಎಸ್ 1987ರ ಬ್ಯಾಚ್‌ನ ಕರ್ನಾಟಕ ಕೇಡರ್ ಹಿರಿಯ ಅಧಿಕಾರಿಯಾಗಿರುವ ಅಜಯ್ ಸೇಠ್ ಅವರು 2018ರ ಜುಲೈನಲ್ಲಿ ಬೆಂಗಳೂರು ಮೆಟ್ರೊ ರೈಲು ನಿಗಮದ (ಬಿಎಂಆರ್‌ಸಿಎಲ್) ವ್ಯವಸ್ಥಾಪಕ ನಿರ್ದೇಶಕರಾಗಿ ಅಧಿಕಾರ ಸ್ವೀಕರಿಸಿದ್ದರು. 2021ರ ಏಪ್ರಿಲ್‌ನಲ್ಲಿ ಅವರು ಕೇಂದ್ರ ಸೇವೆಗೆ ತೆರಳಿದ್ದರು.
ಬಿಎಂಆರ್‌ಸಿಎಲ್ ವ್ಯವಸ್ಥಾಪಕ ನಿರ್ದೇಶಕರಾಗಿದ್ದಾಗ ನಮ್ಮ ಮೆಟ್ರೊ ನಿರ್ಮಾಣ ಕಾರ್ಯ ವೇಗ ಪಡೆದುಕೊಳ್ಳುವಲ್ಲಿ ಸೇಠ್ ಶ್ರಮಿಸಿದ್ದರು.
ಕೇಂದ್ರ ಹಣಕಾಸು ಸಚಿವಾಲಯದ ಕಾರ್ಯದರ್ಶಿ ಹುದ್ದೆಯೂ ಆ ಸಚಿವಾಲಯದ ಸಚಿವರ ನಂತರದ ಆಡಳಿತಾತ್ಮಕ ಪ್ರಮುಖ ಹುದ್ದೆಯಾಗಿದೆ. ಈ ಕುರಿತು ಫಿನಾನ್ಸಿಯಲ್ ಎಕ್ಸ್‌ಪ್ರೆಸ್ ವೆಬ್‌ಸೈಟ್ ವರದಿ ಮಾಡಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.