ADVERTISEMENT

ಹಲವು ಡಿಎಸ್‌ಎಸ್‌ ಇವೆ, ಒಂದಾಗಬೇಕು: ಮಾದಾರ ಚನ್ನಯ್ಯ ಸ್ವಾಮೀಜಿ

​ಪ್ರಜಾವಾಣಿ ವಾರ್ತೆ
Published 12 ಸೆಪ್ಟೆಂಬರ್ 2021, 16:15 IST
Last Updated 12 ಸೆಪ್ಟೆಂಬರ್ 2021, 16:15 IST
ಬಸವಮೂರ್ತಿ ಮಾದಾರ ಚನ್ನಯ್ಯ ಸ್ವಾಮೀಜಿ
ಬಸವಮೂರ್ತಿ ಮಾದಾರ ಚನ್ನಯ್ಯ ಸ್ವಾಮೀಜಿ   

ದಾವಣಗೆರೆ: ‘ನಾವು ಬಲಪಂಥದ ಬಗ್ಗೆ ಮಾತನಾಡುತ್ತೇವೆ. ಅವರು ಹುಟ್ಟು ಹಾಕಿರುವ ಆರ್‌ಎಸ್‌ಎಸ್‌ ಸಂಘಟನೆ ಒಂದೇ ಇದೆ. ಆದರೆ ನಮ್ಮ ಡಿಎಸ್‌ಎಸ್‌ ಹಲವಾರು ಇವೆ. ಇವೆಲ್ಲವೂ ಒಂದಾಗಬೇಕು’ ಎಂದು ಮಾದಾರ ಚನ್ನಯ್ಯ ಗುರುಪೀಠದ ಪೀಠಾಧ್ಯಕ್ಷ ಬಸವಮೂರ್ತಿ ಮಾದಾರ ಚನ್ನಯ್ಯ ಸ್ವಾಮೀಜಿ ಆಶಯ ವ್ಯಕ್ತಪಡಿಸಿದರು.

ಸ್ವಾಭಿಮಾನಿ ಎಸ್‌ಸಿ/ಎಸ್‌ಟಿ ಸಂಘಟನೆಗಳ ಒಕ್ಕೂಟದಿಂದ ಭಾನುವಾರ ನಗರದಲ್ಲಿ ನಡೆದ ವಿಚಾರಸಂಕಿರಣದಲ್ಲಿ ಅವರು ಮಾತನಾಡಿದರು.

‘ವಿಧಾನಸಭೆಯಲ್ಲಿ ಎಸ್‌ಸಿ, ಎಸ್‌ಟಿಯ 52 ಶಾಸಕರಿದ್ದಾರೆ. ಆದರೆ ರಾಜ್ಯದ ಚುಕ್ಕಾಣಿ ಹಿಡಿಯಲು ಆಗಲಿಲ್ಲ. ನಮ್ಮವರು ಮುಖ್ಯಮಂತ್ರಿ ಆಗಲಿಲ್ಲ. ಬೇರೆ ಪಕ್ಷದಿಂದ ಬಂದ ಕೇವಲ 13 ಶಾಸಕರಿಂದ ಬಿ.ಎಸ್‌.ಯಡಿಯೂರಪ್ಪ ಸಿ.ಎಂ ಆದರು. ನಾವು ಎಸ್‌ಸಿ, ಎಸ್‌ಟಿ ಎಂದು ಕಚ್ಚಾಡುವುದನ್ನು ನಿಲ್ಲಿಸಬೇಕು. ಎಸ್‌ಸಿಯಲ್ಲಿರುವ 101 ಜಾತಿ, ಎಸ್‌ಟಿಯಲ್ಲಿರುವ 50 ಜಾತಿಗಳು ಒಂದಾಗಬೇಕು. ಅದಕ್ಕಾಗಿ ಈ ಸಮುದಾಯಗಳ ಸ್ವಾಮೀಜಿಗಳು ಸೇರಿ ಜಾಗೃತಿ ಮೂಡಿಸುವ ಕೆಲಸ ಮಾಡಬೇಕು’ ಎಂದೂ ಸಲಹೆ ನೀಡಿದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.