ADVERTISEMENT

ನಾಟಾ: ಆಳ್ವಾಸ್‌ನ 480 ವಿದ್ಯಾರ್ಥಿಗಳು ತೇರ್ಗಡೆ

​ಪ್ರಜಾವಾಣಿ ವಾರ್ತೆ
Published 7 ಮೇ 2019, 19:03 IST
Last Updated 7 ಮೇ 2019, 19:03 IST

ಮೂಡುಬಿದಿರೆ: ನ್ಯಾಷನಲ್ ಆಪ್ಟಿಟ್ಯುಡ್‌ ಟೆಸ್ಟ್‌ ಫಾರ್ ಆರ್ಕಿಟೆಕ್ಚರ್ (ನಾಟಾ) ರಾಷ್ಟ್ರೀಯ ಪರೀಕ್ಷೆಯಲ್ಲಿ ಮೂಡುಬಿದರೆಯ ಆಳ್ವಾಸ್ ಪದವಿಪೂರ್ವ ಕಾಲೇಜಿನ 480 ವಿದ್ಯಾರ್ಥಿಗಳು ತೇರ್ಗಡೆಯಾಗಿದ್ದಾರೆ.

26 ವಿದ್ಯಾರ್ಥಿಗಳು 130ಕ್ಕಿಂತ ಅಧಿಕ ಅಂಕ ಗಳಿಸಿ ವಿಶಿಷ್ಟ ಸಾಧನೆ ತೋರಿದ್ದಾರೆ. 52 ವಿದ್ಯಾರ್ಥಿಗಳು 125 ಕ್ಕಿಂತ ಅಧಿಕ, 87 ವಿದ್ಯಾರ್ಥಿಗಳು 120 ಕ್ಕಿಂತ ಅಧಿಕ, 166 ವಿದ್ಯಾರ್ಥಿಗಳು 110 ಕ್ಕಿಂತ ಅಧಿಕ, 265 ವಿದ್ಯಾರ್ಥಿಗಳು 100 ಕ್ಕಿಂತ ಅಧಿಕ, 353 ವಿದ್ಯಾರ್ಥಿಗಳು 90 ಕ್ಕಿಂತ ಅಧಿಕ, 428 ವಿದ್ಯಾರ್ಥಿಗಳು 80 ಕ್ಕಿಂತ ಅಧಿಕ ಅಂಕ ಪಡೆದಿದ್ದಾರೆ.

ಪರೀಕ್ಷೆ ಬರೆದ 523 ವಿದ್ಯಾರ್ಥಿಗಳಲ್ಲಿ 480 ಜನ ಹೆಚ್ಚು ಅಂಕಗಳೊಂದಿಗೆ ತೇರ್ಗಡೆಯಾಗಿದ್ದು, ಸ್ಪರ್ಧಾತ್ಮಕ ಯುಗದಲ್ಲಿ ವಿದ್ಯಾರ್ಥಿಗಳ ನೆಚ್ಚಿನ ಆಯ್ಕೆಯಾಗಿರುವ ಆರ್ಕಿಟೆಕ್ಚರ್‌ ಕೋರ್ಸ್‌ ಸೇರಲು ಈ ಪರೀಕ್ಷೆ ಸಹಕಾರಿಯಾಗಿದೆ ಎಂದು ಆಳ್ವಾಸ್ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಡಾ.ಎಂ.ಮೋಹನ ಆಳ್ವ ಮಾಹಿತಿ ನೀಡಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.