ADVERTISEMENT

ನಾನು ಯಾವ ಸಿಎಂಗೂ ಕಡಿಮೆ ಇಲ್ಲ– ಎಂಟಿಬಿ ನಾಗರಾಜ್

​ಪ್ರಜಾವಾಣಿ ವಾರ್ತೆ
Published 1 ಡಿಸೆಂಬರ್ 2019, 13:42 IST
Last Updated 1 ಡಿಸೆಂಬರ್ 2019, 13:42 IST
   

ಹೊಸಕೋಟೆ: ‘ಸಿಎಂಗೆ ಇರುವುದಕ್ಕಿಂತಲೂ ಎಲ್ಲವೂ ನನ್ನ ಬಳಿ ಹೆಚ್ಚಾಗಿಯೇ ಇದೆ. ನಾನು ಮಂತ್ರಿಯಾಗಬೇಕು; ಸಿಎಂ ಆಗಬೇಕು ಅಂತ ಬಿಜೆಪಿಗೆ ಬಂದಿಲ್ಲ’ ಎಂದು ಸಿದ್ದರಾಮಯ್ಯ ಅವರ ಹೇಳಿಕೆಗೆ ಬಿಜೆಪಿ ಅಭ್ಯರ್ಥಿ ಎಂ.ಟಿ.ಬಿ ನಾಗರಾಜ್ ಪ್ರತಿಕ್ರಿಯಿಸಿದರು.

ಅವರು ನಗರದ ಎಂ.ಟಿ.ಬಿ. ಭವನದಲ್ಲಿ ಸುದ್ದಿಗಾರರ ಜತೆ ಮಾತನಾಡಿ, ‘ನಾನು ಅಧಿಕಾರಕ್ಕಾಗಿ ಬಿಜೆಪಿಗೆ ಬರಲಿಲ್ಲ. ನನ್ನನ್ನು ಹೊಸಕೋಟೆಗೆ ಎಸ್.ಎಂ ಕೃಷ್ಣ ಕರೆತಂದರು. ನನಗಿಂತ ಮೊದಲು ಇಲ್ಲಿ ಕಾಂಗ್ರೆಸ್‌ನಿಂದ ಸ್ಪರ್ಧಿಸಿದ್ದ ಮುನೇಗೌಡರು ಮೂರು ಬಾರಿ ಸೋತಿದ್ದರು. ಅದಕ್ಕೆ ಗತಿ ಇಲ್ಲದೆ ನನ್ನನ್ನು ತಂದು ಮಿನಿ ಬಿಹಾರದಂತಿದ್ದ ಇಲ್ಲಿಗೆ ನಿಲ್ಲಿಸಿದರು’ ಎಂದರು.

‘ನನ್ನಿಂದಾಗಿ ಈ ಭಾಗದಲ್ಲಿ ಕಾಂಗ್ರೆಸ್ ವರ್ಚಸ್ಸು ಹೆಚ್ಚಾಯಿತೇ ವಿನಾ ಆ ಪಕ್ಷದಿಂದ ನನ್ನ ವರ್ಚಸ್ಸು ಹೆಚ್ಚಲಿಲ್ಲ’ ಎಂದರು.

ADVERTISEMENT

‘ಸಿದ್ದರಾಮಯ್ಯ ಕೇವಲ ಯೋಜನೆಗಳನ್ನು ಘೋಷಣೆ ಮಾಡಿದರು. ಆದರೆ ಹಣ ಬಿಡುಗಡೆ ಮಾಡಲಿಲ್ಲ. ಅದಕ್ಕಾಗಿ ಬೇಸರವಾಯಿತು’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.