ಸೇಡಂ (ಕಲಬುರ್ಗಿ ಜಿಲ್ಲೆ): ಪಟ್ಟಣದ ಕ್ವಾರಂಟೈನ್ ಕೇಂದ್ರದಲ್ಲಿದ್ದ ಗರ್ಭಿಣಿಗೆ ಭಾನುವಾರ ಆಂಬುಲೆನ್ಸ್‌ನಲ್ಲಿ ಹೆರಿಗೆಯಾಗಿದ್ದು, ಶಿಶು ಮೃತಪಟ್ಟಿದೆ.
ಪುಣೆಯಿಂದ ಸೇಡಂಗೆ ಜೂನ್ 11ರಂದು ಬಂದ ಮರಿಯಾ ಅಶೋಕ (35) ಅವರನ್ನು ಅಂದೇ ಕ್ವಾರಂಟೈನ್ ಮಾಡಲಾಗಿತ್ತು. ಸೋಮವಾರ ಬೆಳಿಗ್ಗೆ ಹೆರಿಗೆ ನೋವು ಕಾಣಿಸಿಕೊಂಡಿದ್ದರಿಂದ ಅವರನ್ನು ಸರ್ಕಾರಿ ಆಸ್ಪತ್ರೆಗೆ ಕರೆದೊಯ್ಯಲಾಯಿತು.
ಆದರೆ, ಆಸ್ಪತ್ರೆ ವೈದ್ಯರು ಕಲಬುರ್ಗಿಗೆ ಕರೆದೊಯ್ಯಲು ಸೂಚಿಸಿದರು. ಆಂಬುಲೆನ್ಸ್‌ನಲ್ಲಿ ದಾರಿ ಮಧ್ಯೆಯೇ ಅವರು ಗಂಡು ಮಗುವಿಗೆ ಜನ್ಮ ನೀಡಿದರು. ಆದರೆ, ಕೆಲವೇ ಕ್ಷಣಗಳಲ್ಲಿ ಮಗು ಮೃತಪಟ್ಟಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.