ADVERTISEMENT

ಅಂಕೇಗೌಡರ ಪುಸ್ತಕ ಮನೆ: ನೆರವಿಗೆ ಸೂಚನೆ

​ಪ್ರಜಾವಾಣಿ ವಾರ್ತೆ
Published 29 ಜನವರಿ 2026, 18:52 IST
Last Updated 29 ಜನವರಿ 2026, 18:52 IST
ಅಂಕೇಗೌಡರ ಪುಸ್ತಕದ ಮನೆ
ಅಂಕೇಗೌಡರ ಪುಸ್ತಕದ ಮನೆ   

ಬೆಂಗಳೂರು: ಮಂಡ್ಯದ ಅಂಕೇಗೌಡರ ‘ಪುಸ್ತಕ ಮನೆ’ಯಲ್ಲಿ ಪುಸ್ತಕಗಳನ್ನು ಜೋಡಿಸಲು ಅಗತ್ಯವಿರುವ ರ‍್ಯಾಕ್‌ಗಳ ಅಳವಡಿಕೆಗೆ ಅನುದಾನ ಮಂಜೂರು ಮಾಡುವ ಬಗ್ಗೆ ಕಡತ ಮಂಡಿಸಿ ಎಂದು ಸಚಿವ ಕನ್ನಡ ಮತ್ತು ಸಂಸ್ಕೃತಿ ಶಿವರಾಜ ತಂಗಡಗಿ ಅವರು ಅಧಿಕಾರಿಗಳಿಗೆ ಸೂಚಿಸಿದ್ದಾರೆ.

‘ಅಂಕೇಗೌಡರು ತಮ್ಮಪುಸ್ತಕ ಮನೆಯಲ್ಲಿ 25 ಲಕ್ಷಕ್ಕೂ ಹೆಚ್ಚು ಪುಸ್ತಕಗಳನ್ನು ಸಂಗ್ರಹಿಸಿದ್ದಾರೆ. ಆದರೆ ರ‍್ಯಾಕ್‌ಗಳ ಕೊರತೆಯಿಂದ ಪುಸ್ತಕಗಳ ನಿರ್ವಹಣೆ ಸಾಧ್ಯವಾಗುತ್ತಿಲ್ಲ ಎಂದು ಮಾಧ್ಯಮಗಳು ವರದಿ ಮಾಡಿವೆ. ಸರ್ಕಾರದ ಕಡೆಯಿಂದ ರ‍್ಯಾಕ್‌ ಒದಗಿಸಬೇಕು’ ಎಂದು ಶಾಸಕ ದಿನೇಶ್‌ ಗೂಳಿಗೌಡ ಅವರು ಸಚಿವ ಶಿವರಾಜ ತಂಗಡಗಿ ಅವರಿಗೆ ಗುರುವಾರ ಮನವಿ ಸಲ್ಲಿಸಿದ್ದರು. ಕಡತ ಮಂಡಿಸಿ ಎಂದು ಸಚಿವರು ತಕ್ಷಣವೇ ಅಧಿಕಾರಿಗಳಿಗೆ ಸೂಚಿಸಿದ್ದಾರೆ.

ಪುಸ್ತಕ ಮನೆಯ ವಿಸ್ತರಣೆ, ನಾಗರಿಕ ಬಳಕೆ ನಿವೇಶನ ಮಂಜೂರು ಮಾಡುವಂತೆ ಮತ್ತು ₹5 ಕೋಟಿ ಅನುದಾನ ಒದಗಿಸುವಂತೆ ದಿನೇಶ್‌ ಗೂಳಿಗೌಡ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರಿಗೂ ಮನವಿ ಸಲ್ಲಿಸಿದ್ದಾರೆ. ಪುಸ್ತಕ ಮನೆಯ ಸಂಕಷ್ಟದ ಬಗ್ಗೆ ‘ಪ್ರಜಾವಾಣಿ’ಯು ಗುರುವಾರ ವಿಶೇಷ ವರದಿ ಪ್ರಕಟಿಸಿತ್ತು.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.