ADVERTISEMENT

ಮಿಲಿಟರಿ ಎಂಜಿನಿಯರಿಂಗ್ ಸರ್ವಿಸ್ ಪರೀಕ್ಷೆಯಲ್ಲಿ ಅಂಕೋಲಾದ ಯುವತಿ ಮೊದಲ ರ‍್ಯಾಂಕ್

​ಪ್ರಜಾವಾಣಿ ವಾರ್ತೆ
Published 12 ಫೆಬ್ರುವರಿ 2021, 17:18 IST
Last Updated 12 ಫೆಬ್ರುವರಿ 2021, 17:18 IST
ವಿಜಯಶ್ರೀ
ವಿಜಯಶ್ರೀ   

ಕಾರವಾರ: ರಕ್ಷಣಾ ಇಲಾಖೆಯ ಮಿಲಿಟರಿ ಎಂಜಿನಿಯರಿಂಗ್ ಸರ್ವಿಸ್ (ಎಂ.ಇ.ಎಸ್) ಹಮ್ಮಿಕೊಂಡಿದ್ದ 2020ನೇ ಪರೀಕ್ಷೆಯಲ್ಲಿ ಅಂಕೋಲಾದ ಯುವತಿ ದೇಶಕ್ಕೇ ಮೊದಲ ರ‍್ಯಾಂಕ್ ಪಡೆದುಕೊಂಡಿದ್ದಾರೆ.

ತಾಲ್ಲೂಕಿನ ಹಿಚ್ಕಡದ ವಿಜಯಶ್ರೀ ಈ ಸಾಧನೆ ಮಾಡಿದವರು. ಎಂ.ಇ.ಎಸ್‌ನಲ್ಲಿ ‘ಡೆಪ್ಯುಟಿ ಆರ್ಕಿಟೆಕ್ಟ್’ ಹುದ್ದೆಗೆ ಯು.ಪಿ.ಎಸ್.ಸಿ ಮೂಲಕ ಆನ್‌ಲೈನ್ ವೇದಿಕೆಯಲ್ಲಿ ಪರೀಕ್ಷೆ ಹಮ್ಮಿಕೊಳ್ಳಲಾಗಿತ್ತು. ಬಳಿಕ ದೆಹಲಿಯಲ್ಲಿ ಎರಡು ದಿನ ಸಂದರ್ಶನವಿತ್ತು. ಅದರ ಫಲಿತಾಂಶವು ಗುರುವಾರ ಪ್ರಕಟವಾಗಿದೆ.

ವಾಸುದೇವ ನಾಯಕ ಹಾಗೂ ಕಲ್ಪನಾ ಗಾಂವ್ಕರ್ ಅವರ ಪುತ್ರಿಯಾಗಿರುವ ವಿಜಯಶ್ರೀ, ಪ್ರಸ್ತುತ ಬೆಂಗಳೂರಿನಲ್ಲಿ ಬಹುರಾಷ್ಟ್ರೀಯ ಕಂಪನಿಯೊಂದರಲ್ಲಿ ಉದ್ಯೋಗದಲ್ಲಿದ್ದಾರೆ.

ADVERTISEMENT

ಬೆಂಗಳೂರಿನ ಬಿ.ಎಂ.ಎಸ್‌.ಐ.ಟಿ ಕಾಲೇಜಿನಲ್ಲಿ ವಾಸ್ತುಶಿಲ್ಪ ವಿಷಯದಲ್ಲಿ ಪದವಿ ಅಧ್ಯಯನ ಮಾಡಿದ್ದಾರೆ. ಅಲ್ಲದೇ ಅವರು ಇಂಗ್ಲಿಷ್ ಸಾಹಿತ್ಯ ಮತ್ತು ನಗರಾಭಿವೃದ್ಧಿ ವಿಷಯದಲ್ಲಿ ಸ್ನಾತಕೋತ್ತರ ಪದವೀಧರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.