ADVERTISEMENT

ಬೆಂಗಳೂರಿಗೆ ಮತ್ತೊಂದು ಡೆಮು ರೈಲು

​ಪ್ರಜಾವಾಣಿ ವಾರ್ತೆ
Published 17 ಜೂನ್ 2021, 20:33 IST
Last Updated 17 ಜೂನ್ 2021, 20:33 IST

ತುಮಕೂರು: ನೈರುತ್ಯ ರೈಲ್ವೆಯು ತುಮಕೂರು– ಯಶವಂತಪುರ ಮಧ್ಯೆ ಮತ್ತೊಂದು ಡೆಮು ರೈಲು ಸಂಚಾರ ಗುರುವಾರದಿಂದ ಆರಂಭವಾಗಿದೆ.

ಯಶವಂತಪುರದಿಂದ ಬೆಳಗ್ಗೆ 5.30ಕ್ಕೆ, ತುಮಕೂರಿನಿಂದ ಬೆಳಗ್ಗೆ 8ಕ್ಕೆ, ಯಶವಂತಪುರದಿಂದ ಬೆಳಗ್ಗೆ 9.30ಕ್ಕೆ, ತುಮಕೂರಿನಿಂದ ಸಂಜೆ 4.20ಕ್ಕೆ, ಯಶವಂತಪುರದಿಂದ ಸಂಜೆ 6ಕ್ಕೆ ಹಾಗೂ ತುಮಕೂರಿನಿಂದ ರಾತ್ರಿ 7.40ಕ್ಕೆ ಹೊರಡಲಿದೆ.

ಯಶವಂತಪುರ‌ ಮತ್ತು ತುಮಕೂರು ನಡುವಿನ ಎಲ್ಲ ನಿಲ್ದಾಣಗಳಲ್ಲೂ ರೈಲು ನಿಲುಗಡೆ ಮಾಡಲಿದೆ.ಕೋವಿಡ್ ಲಾಕ್‌ಡೌನ್ ಸಡಿಲಿಕೆಯಿಂದ ಕೈಗಾರಿಕೆಗಳು ಮತ್ತು ಇತರ ಚಟುವಟಿಕೆಗಳು ಆರಂಭವಾಗಿದ್ದು, ತುಮಕೂರಿನಿಂದ ಬೆಂಗಳೂರಿಗೆ ಉದ್ಯೋಗಕ್ಕೆ ತೆರಳುವವರ ಸಂಖ್ಯೆ ಹೆಚ್ಚಾಗಿದೆ. ಕೇವಲ ಒಂದೇ ಡೆಮು ರೈಲಿನ ಸಂಚಾರದಿಂದಾಗಿ ಅತಿ ಹೆಚ್ಚಿನ ದಟ್ಟಣೆ ಇತ್ತು. ಕೋವಿಡ್ ಸುರಕ್ಷತಾ ಕ್ರಮವಾಗಿ ಅಂತರ ಕಾಯ್ದುಕೊಳ್ಳುವುದು ಕಷ್ಟಕರವಾಗಿತ್ತು. ಈಗ ಮತ್ತೊಂದು ರೈಲು ಸಂಚಾರ ಆರಂಭಿಸಿರುವುದು ಪ್ರಯಾಣಿಕರಿಗೆ ಅನುಕೂಲವಾಗಿದೆ ಎಂದು ತುಮಕೂರು– ಬೆಂಗಳೂರು ರೈಲ್ವೆ ಪ್ರಯಾಣಿಕರ ವೇದಿಕೆ ಪ್ರಧಾನ ಕಾರ್ಯದರ್ಶಿ ಕರಣಂ ರಮೇಶ್ ತಿಳಿಸಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.