ADVERTISEMENT

ಸಿಎಂ ಭೇಟಿಗೆ ಆಂಟಿಜೆನ್‌ ಪರೀಕ್ಷೆ ಕಡ್ಡಾಯ: ನೆಗೆಟಿವ್‌ ಇದ್ದರೆ ಭೇಟಿಗೆ ಅವಕಾಶ

​ಪ್ರಜಾವಾಣಿ ವಾರ್ತೆ
Published 8 ಅಕ್ಟೋಬರ್ 2020, 11:04 IST
Last Updated 8 ಅಕ್ಟೋಬರ್ 2020, 11:04 IST
ಸಿಎಂ ಗೃಹ ಕಚೇರಿ ಆವರಣದಲ್ಲಿ ಆಂಟಿಜೆನ್‌ ಪರೀಕ್ಷೆ
ಸಿಎಂ ಗೃಹ ಕಚೇರಿ ಆವರಣದಲ್ಲಿ ಆಂಟಿಜೆನ್‌ ಪರೀಕ್ಷೆ   

ಬೆಂಗಳೂರು: ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರನ್ನು ಕೃಷ್ಣಾ ಅಥವಾ ಕಾವೇರಿಯಲ್ಲಿ ಭೇಟಿ ಮಾಡಲು ಬರುವ ಸಾರ್ವಜನಿಕರು ಅಥವಾ ನಿಯೋಗಗಳು ಕಡ್ಡಾಯವಾಗಿ ಆಂಟಿಜೆನ್‌ ಪರೀಕ್ಷೆ ಮಾಡಿಸಿಕೊಳ್ಳಬೇಕು.

ಇದಕ್ಕಾಗಿ ಕೃಷ್ಣಾ ಮತ್ತು ಕಾವೇರಿಯಲ್ಲಿ ಆಂಟಿಜೆನ್‌ ಪರೀಕ್ಷೆಯ ವ್ಯವಸ್ಥೆಯನ್ನು ಮಾಡಲಾಗಿದೆ. ಪರೀಕ್ಷೆಯಲ್ಲಿ ನೆಗೆಟಿವ್‌ ವರದಿ ಬಂದರೆ ಮಾತ್ರ ಮುಖ್ಯಮಂತ್ರಿ ಭೇಟಿಗೆ ಅವಕಾಶವಿರುತ್ತದೆ. ಪಾಸಿಟವ್ ಬಂದವರಿಗೆ ಭೇಟಿಗೆ ಅವಕಾಶ ಇಲ್ಲ ಎಂದು ಮುಖ್ಯಮಂತ್ರಿ ಕಚೇರಿ ಮೂಲಗಳು ತಿಳಿಸಿವೆ.

ಪಾಸಿಟಿವ್‌ ಬಂದವರಿಗೆ ಸ್ಥಳದಲ್ಲೇ ಆರ್‌ಟಿಪಿಸಿಎಆರ್ ಪರೀಕ್ಷೆ ಮಾಡಲಾಗುವುದು. ಈ ಪರೀಕ್ಷೆಯಲ್ಲಿಯೂ ಪಾಸಿಟಿವ್‌ ಬಂದರೆ ಅವರನ್ನು ಚಿಕಿತ್ಸೆಗೆ ಆಸ್ಪತ್ರೆಗೆ ಕಳಿಸಲು ವ್ಯವಸ್ಥೆ ಮಾಡಲಾಗುವುದು. ವಿವಿಧ ನಿಯೋಗಗಳಲ್ಲಿ ಬರುವವರಲ್ಲಿ ಕೊರೊನಾ ಸೋಂಕಿತರು ಇರಬಹುದಾದ ಕಾರಣ, ಮುನ್ನೆಚ್ಚರಿಕೆ ವಹಿಸಲು ಆಂಟಿಜೆನ್‌ ಪರೀಕ್ಷೆ ವ್ಯವಸ್ಥೆ ಮಾಡಲಾಗಿದೆ.

ADVERTISEMENT

ಮುಖ್ಯಮಂತ್ರಿಯವರನ್ನು ಭೇಟಿ ಮಾಡಲು ಬರುವ ಅಧಿಕಾರಿಗಳು ವಾರಕ್ಕೊಮ್ಮೆ ಪರೀಕ್ಷೆ ಮಾಡುವುದರಿಂದ ಅವರಿಗೆ ಪ್ರತಿ ನಿತ್ಯ ಪರೀಕ್ಷೆ ಮಾಡಿಸಿಕೊಳ್ಳುವ ಅಗತ್ಯವಿಲ್ಲ ಎಂದು ಮೂಲಗಳು ಹೇಳಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.