ಬೆಂಗಳೂರು: ಕಾಶ್ಮೀರ ಮೂಲದ ಸಮರ ಕಲೆ (ಮಾರ್ಷಲ್ ಆರ್ಟ್ಸ್) ‘ಸ್ಕಾಯ್’ ಅನ್ನು ಪಠ್ಯಕ್ರಮದ ಭಾಗವಾಗಿ ಅಳವಡಿಸಿಕೊಳ್ಳಲು ಅಪೋಲೊ ನ್ಯಾಷನಲ್ ಪಬ್ಲಿಕ್ ಶಾಲೆ ಮುಂದಾಗಿದೆ.
ಶಾಲೆಯಲ್ಲಿ ಈ ಕಾರ್ಯಕ್ರಮದ ಉದ್ಘಾಟನೆ ಇದೇ 25ರಂದು ನಡೆಯಲಿದೆ. ಭಾರತೀಯ ಸ್ಕಾಯ್ ಫೆಡರೇಶನ್ ಜಂಟಿ ಕಾರ್ಯದರ್ಶಿ ಮೊಹಮದ್ ಅಲಿ, ಅಪೋಲೊ ನ್ಯಾಷನಲ್ ಪಬ್ಲಿಕ್ ಶಾಲೆಯ ಉಪಾಧ್ಯಕ್ಷರಾದ ಐಶ್ವರ್ಯಾ ಡಿಕೆಎಸ್ ಹೆಗಡೆ, ಅಂತರರಾಷ್ಟ್ರೀಯ ಸ್ವರ್ಣ ಪದಕ ವಿಜೇತೆ ಸಾನಿಯಾ ಸುಭಾಷ್ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ.
ದೈಹಿಕ ಕ್ಷಮತೆ, ಮಾನಸಿಕ ಏಕಾಗ್ರತೆ ಹಾಗೂ ಆಧ್ಯಾತ್ಮಿಕ ಶಿಸ್ತು ಹೊಂದಿರುವ ಈ ಕಲೆಯನ್ನು ನುರಿತ ಸ್ಕಾಯ್ ಪಟುಗಳು ಕಾರ್ಯಕ್ರಮದಲ್ಲಿ ಪ್ರದರ್ಶಿಸಲಿದ್ದಾರೆ. ಮಕ್ಕಳ ಮಾನಸಿಕ ಹಾಗೂ ದೈಹಿಕ ಆರೋಗ್ಯಕ್ಕೆ ನೆರವಾಗುವ ಈ ಸಮರ ಕಲೆಯನ್ನು ಪಠ್ಯದ ಭಾಗವಾಗಿ ಪರಿಚಯಿಸುವ ಮೂಲಕ, ಈ ಕಲೆಯ ಮೇಲಿರುವ ಬದ್ಧತೆ ಹಾಗೂ ಕಾಳಜಿಯನ್ನು ಶಾಲಾ ಆಡಳಿ ಪ್ರದರ್ಶಿಸಿದೆ’ ಎಂದು ಪ್ರಾಂಶುಪಾಲರಾದ ಬಿ.ಎ. ವೇದಾವತಿ ಹೇಳಿದ್ದಾರೆ.
‘ಸ್ಕಾಯ್ ಸಮರ ಕಲೆಯ ಭವ್ಯ ಸಾಂಸ್ಕೃತಿಕ ಪರಂಪರೆಯನ್ನು ಮಕ್ಕಳಿಗೆ ಪರಿಚಯಿಸುವ ಮೂಲಕ ಅವರಲ್ಲಿ ಹೆಮ್ಮೆ, ಶಿಸ್ತು ಹಾಗೂ ಸ್ವಯಂ ಜಾಗೃತಿಯನ್ನು ಮೂಡಿಸುವುದು ಮೂಲ ಉದ್ದೇಶ’ ಎಂದೂ ಅವರು ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.