ADVERTISEMENT

ಕೊಪ್ಪಳ: ಏಷ್ಯಾದ ಅತಿದೊಡ್ಡ ಆಟಿಕೆ ಕ್ಲಸ್ಟರ್‌ಗೆ ಇಂದು ಸಿ.ಎಂ ಚಾಲನೆ

​ಪ್ರಜಾವಾಣಿ ವಾರ್ತೆ
Published 8 ಜನವರಿ 2021, 20:31 IST
Last Updated 8 ಜನವರಿ 2021, 20:31 IST
ಗೊಂಬೆ ಮತ್ತು ಆಟಿಕೆಗಳು–ಸಾಂದರ್ಭಿಕ ಚಿತ್ರ
ಗೊಂಬೆ ಮತ್ತು ಆಟಿಕೆಗಳು–ಸಾಂದರ್ಭಿಕ ಚಿತ್ರ   

ಕೊಪ್ಪಳ: ಕುಕನೂರು ತಾಲ್ಲೂಕಿನ ತಳಬಾಳ ಗ್ರಾಮದಲ್ಲಿರುವ 435 ಎಕರೆ ಜಮೀನಿನಲ್ಲಿ ಸ್ಥಾಪನೆಯಾಗುತ್ತಿರುವ ವಿಶೇಷ ಆರ್ಥಿಕ ವಲಯದಲ್ಲಿ ₹5 ಸಾವಿರ ಕೋಟಿ ವೆಚ್ಚದ ಆಟಿಕೆ (ಟಾಯ್ಸ್) ಕ್ಲಸ್ಟರ್‌ನಿರ್ಮಾಣಕ್ಕೆ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರು ಜ. 9ರಂದು ಬೆಳಿಗ್ಗೆ 10.30ಕ್ಕೆ ಭೂಮಿಪೂಜೆ ನೆರೆವೇರಿಸಲಿದ್ದಾರೆ.

‘ಏಕಸ್‌ ಇಂಡಿಯಾ ಕಂಪನಿ ರೈತರ ಜಮೀನು ಖರೀದಿಸಿದ್ದು, ಇಲ್ಲಿ ಅತ್ಯಾಧುನಿಕ ಆಟಿಕೆ ಸಾಮಗ್ರಿ ಸೇರಿದಂತೆ ವಿವಿಧ ಆಕರ್ಷಕ ಗೊಂಬೆಗಳನ್ನು ತಯಾರಿಸಲಾಗುವುದು. 40 ಸಾವಿರ ಜನರಿಗೆ ಉದ್ಯೋಗ ನೀಡುವ ಹಾಗೂವಾರ್ಷಿಕ ₹2,300 ಕೋಟಿ ವಹಿವಾಟಿನ ಗುರಿ ಹೊಂದಲಾಗಿದೆ.2023ಕ್ಕೆ ಘಟಕ ಕಾರ್ಯಾರಂಭ ಮಾಡಲಿದೆ' ಎಂದು ಕಂಪನಿಯ ವ್ಯವಸ್ಥಾಪಕ ನಿರ್ದೇಶಕ ಅರವಿಂದ ಮೆಳ್ಳಿಗೇರಿ ತಿಳಿಸಿದ್ದಾರೆ.

‘ಇಲ್ಲಿ ಆಟಿಕೆ ಕ್ಲಸ್ಟರ್ ಏಷ್ಯಾದಲ್ಲಿಯೇ ಅತಿ ದೊಡ್ಡ ಪ್ರಮಾಣದಲ್ಲಿ ನಿರ್ಮಾಣವಾಗಲಿದೆ. ಕೌಶಲ ತರಬೇತಿ ನೀಡಲು ತಳಕಲ್‌ ಎಂಜಿನಿಯರಿಂಗ್‌ ಕಾಲೇಜಿನಲ್ಲಿ ಕೌಶಲಾಭಿವೃದ್ಧಿ ಕೇಂದ್ರ ಆರಂಭಿಸಲಾಗಿದೆ. ಪ್ರಧಾನಿ ನರೇಂದ್ರ ಮೋದಿ ಅವರ ಆತ್ಮನಿರ್ಭರ
ಭಾರತ ಯೋಜನೆಗೆ ಪೂರಕವಾಗಿ ಇಲ್ಲಿ ಈ ಘಟಕ ಆರಂಭಿಸಲಾಗುತ್ತಿದೆ' ಎಂದು ಶಾಸಕ ಹಾಲಪ್ಪ ಆಚಾರ್‌ ತಿಳಿಸಿದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.