
ಪ್ರಜಾವಾಣಿ ವಿಶೇಷಹಾಸನ ನಗರದ ಎಂ.ಜಿ. ರಸ್ತೆಯಲ್ಲಿ ಇರುವ ಬಿಜೆಪಿ ಯುವ ಮುಖಂಡ ಐನೆಟ್ ವಿಜಯ್‌ಕುಮಾರ್ ಅವರ ಕಚೇರಿ ಮೇಲೆ 20 ಕ್ಕೂ ಹೆಚ್ಚು ಮಂದಿ ಕಿಡಿಗೇಡಿಗಳು ಶುಕ್ರವಾರ ದಾಳಿ ಮಾಡಿದ್ದು, ವಿಜಯ್‌ಕುಮಾರ್ ಅವರ ಮೇಲೆ ಹಲ್ಲೆ ನಡೆಸಿದ್ದಾರೆ. ಕಚೇರಿ ಗಾಜುಗಳನ್ನು ಒಡೆದು ಹಾಕಲಾಗಿದ್ದು, ಪ್ರೀತಂಗೌಡ ಬೆಂಬಲಿಗರು ಈ ಹಲ್ಲೆ ನಡೆಸಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ. ಈ ಕುರಿತು ಪ್ರತಿಕ್ರಿಯಿಸಿರುವ ಐನೆಟ್ ವಿಜಯ್‌ಕುಮಾರ್, ‘ಕಚೇರಿಗೆ ಬಂದ ಕೆಲವರು ಮಾತನಾಡೋಣ ಬನ್ನಿ ಎಂದು ಕರೆದರು. ಅದಕ್ಕೆ ಮಾತಾಡೋಣ ಬನ್ನಿ ಎಂದೆ. ಪ್ರೀತಂಗೌಡ ಬಗ್ಗೆ ಮಾತನಾಡುತ್ತಿಯಾ ಎಂದು ಹಲ್ಲೆ ಮಾಡಿದರು. 100–150 ಕ್ಕೂ ಹೆಚ್ಚು ಜನರಿದ್ದರು. ಪ್ರೀತಂಗೌಡ ಕಡೆಯವರು ಈ ರೀತಿ ಮಾಡಿದ್ದಾರೆ’ ಎಂದು ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.