ADVERTISEMENT

ಮೆಟ್ರೊ ನಿಲ್ದಾಣದಲ್ಲಿ ‘ಶೇರಿಂಗ್ ಆಟೊ’ ಸೌಲಭ್ಯ

ಇಂದಿರಾನಗರದಲ್ಲಿ ‘ನಮ್ಮ ಆಟೊ’ ಚಾಲಕರು ಸಂಸ್ಥೆಯಿಂದ ಆರಂಭ

​ಪ್ರಜಾವಾಣಿ ವಾರ್ತೆ
Published 12 ಫೆಬ್ರುವರಿ 2020, 19:39 IST
Last Updated 12 ಫೆಬ್ರುವರಿ 2020, 19:39 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಬೆಂಗಳೂರು: ಇಂದಿರಾನಗರ ಮೆಟ್ರೊ ನಿಲ್ದಾಣದಿಂದ ಎಂಬಸಿ ಗಾಲ್ಫ್‌ ಲಿಂಕ್ಸ್‌ ಬ್ಯುಜಿನೆಸ್‌ ಪಾರ್ಕ್‌ ತನಕ ‘ನಮ್ಮ ಆಟೊ’ ಎಂಬ ಶೇರಿಂಗ್ ಆಟೊ ಸೌಲಭ್ಯವನ್ನು ‘ನಮ್ಮ ಆಟೊ’ ಚಾಲಕರು ಸಂಸ್ಥೆ ಆರಂಭಿಸಿದೆ.

‘ನಿರ್ದಿಷ್ಟ ಮಾರ್ಗದಲ್ಲಿ ಆಟೊದಲ್ಲಿ ಪ್ರಯಾಣಿಸಬಹುದು. ಇಲ್ಲಿ 12 ನಿಲ್ದಾಣಗಳಿದ್ದು, ಎಲ್ಲೇ ಇಳಿದರೂ ತಲಾ ₹30 ದರ ನೀಡಬೇಕು. ಸಾರಿಗೆ ನಿಯಮದಂತೆ ಮೂವರು ಪ್ರಯಾಣಿಕರನ್ನು ಮಾತ್ರ ಕರೆದೊಯ್ಯಲಾಗುತ್ತಿದೆ’ ಎಂದು ‘ನಮ್ಮ ಆಟೊ’ ಚಾಲಕರ ಸಹಕಾರ ಸಂಘದ ಉಪಾಧ್ಯಕ್ಷ ಜಯರಾಂ ‘‍ಪ್ರಜಾವಾಣಿ’ಗೆ ತಿಳಿಸಿದರು.

‘ಯುರೋಪಿಯನ್‌ ಯೂನಿಯನ್‌ ಯೋಜನೆಯಡಿ ಎಚ್‌ಎಐಎಲ್‌ ಸಂಸ್ಥೆ ಆ್ಯಪ್‌ ಅಭಿವೃದ್ಧಿಪಡಿಸಿದೆ. ಆ್ಯಪ್ ಬಳಸಿ ಪ್ರಯಾಣಿಕರು ಆಟೋ ರಿಕ್ಷಾ ಹತ್ತಬಹುದು. ನಿಗದಿತ ಸ್ಥಳದಿಂದ ನೇರವಾಗಿ ಬಂದವರೂ ಪ್ರಯಾಣ ಮಾಡಬಹುದು’ ಎಂದು ಅವರು ಹೇಳಿದರು.

ADVERTISEMENT

‘ಈ ಮಾರ್ಗದಲ್ಲಿ ಆಟೊದಲ್ಲಿ ಪ್ರಯಾಣಿಸುವವರು ₹100ರಿಂದ ₹150 ಪಾವತಿಸಬೇಕಾಗಿತ್ತು. ಈಗ ₹30 ದರದಲ್ಲಿ ಪ್ರಯಾಣಿಸಬಹುದು. ಆಟೊ ಚಾಲಕರು ಕೂಡ ಕನಿಷ್ಠ ₹90 ಸಂಪಾದಿಸಬಹುದು. ಬೇರೆ ಮೆಟ್ರೊ ನಿಲ್ದಾಣಗಳಿಂದಲೂ ಈ ರೀತಿಯ ಸೇವೆ ಕಲ್ಪಿಸುವ ಬಗ್ಗೆ ಪರಿಶೀಲನೆ ನಡೆಸಲಾಗುತ್ತಿದೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.