ADVERTISEMENT

ಸ್ವಯಂಚಾಲಿತ ಸಿಗ್ನಲ್‌ ವ್ಯವಸ್ಥೆ ಆರಂಭ

ಬೈಯಪ್ಪನಹಳ್ಳಿ– ವೈಟ್‌ಫೀಲ್ಡ್‌ ರೈಲು ಮಾರ್ಗ

​ಪ್ರಜಾವಾಣಿ ವಾರ್ತೆ
Published 19 ಫೆಬ್ರುವರಿ 2019, 19:40 IST
Last Updated 19 ಫೆಬ್ರುವರಿ 2019, 19:40 IST

ಬೆಂಗಳೂರು: ನಗರದಲ್ಲಿ ಬೈಯಪ್ಪನಹಳ್ಳಿ ಮತ್ತು ವೈಟ್‌ಫೀಲ್ಡ್‌ ರೈಲ್ವೆ ಮಾರ್ಗದ ಸ್ವಯಂಚಾಲಿತ ಸಿಗ್ನಲಿಂಗ್‌ ವ್ಯವಸ್ಥೆ ಮಂಗಳವಾರ ಬೆಳಿಗ್ಗೆ 10.35ಕ್ಕೆ ಕಾರ್ಯಾರಂಭಿಸಿತು.

ಬೈಯಪ್ಪನಹಳ್ಳಿ ಹಾಗೂ ಕೆ.ಆರ್‌.ಪುರ ನಡುವೆ ಇಳಿಜಾರು ಮಾರ್ಗದಲ್ಲಿ ಇಂತಹ ವ್ಯವಸ್ಥೆಯನ್ನು ಅಳವಡಿಸಿರುವುದು ದೇಶದ ರೈಲ್ವೆ ಜಾಲದಲ್ಲಿಯೇ ಮೊದಲ ಪ್ರಯತ್ನ.

ಮೊದಲ ಹಂತದಲ್ಲಿ ದಂಡು ಮತ್ತು ಬೈಯಪ್ಪನಹಳ್ಳಿ ನಡುವಿನ 6 ಕಿ.ಮೀ ಮಾರ್ಗದಲ್ಲಿ ಫೆ.10ರಂದು ಸ್ವಯಂಚಾಲಿತ ಸಿಗ್ನಲಿಂಗ್‌ ವ್ಯವಸ್ಥೆ ಆರಂಭಿಸಲಾಗಿತ್ತು.

ADVERTISEMENT

ಬೆಂಗಳೂರು ದಂಡು, ಬೆಂಗಳೂರು ಪೂರ್ವ, ಬೈಯಪ್ಪನಹಳ್ಳಿ, ಕೆ.ಆರ್‌.ಪುರ, ಹೂಡಿ, ವೈಟ್‌ಫೀಲ್ಡ್‌ ಪ್ಯಾನೆಲ್‌ ಕ್ಯಾಬಿನ್‌ ಹಾಗೂ ವೈಟ್‌ಫೀಲ್ಡ್‌ಗಳಲ್ಲಿ ಸ್ವಯಂಚಾಲಿತ ಸಿಗ್ನಲಿಂಗ್‌ ವ್ಯವಸ್ಥೆ ಕಾರ್ಯನಿರ್ವಹಿಸುತ್ತದೆ. ಹೊಸ ವ್ಯವಸ್ಥೆ ಅಳವಡಿಕೆಯಿಂದಾಗಿ ರೈಲುಗಳ ಸಂಚಾರ ಮತ್ತಷ್ಟು ಸುಗಮಗೊಳ್ಳಲಿದೆ.

ದಂಡು ನಿಲ್ದಾಣ ಮತ್ತು ವೈಟ್‌ಫೀಲ್ಡ್‌ ನಡುವಿನ ಸುಮಾರು 19 ಕಿ.ಮೀ ಉದ್ದದ ಈ ಮಾರ್ಗದಲ್ಲಿ ಪ್ರತಿದಿನ 86 ರೈಲುಗಳು ಹಾಗೂ 26 ಉಪನಗರ ರೈಲುಗಳುಸಂಚರಿಸುತ್ತವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.