ADVERTISEMENT

ಅಯೋಧ್ಯೆ ತೀರ್ಪಿನ ಕುರಿತು ಪ್ರಚೋದನಕಾರಿ ಭಿತ್ತಿಪತ್ರ: ದೂರು ದಾಖಲು

​ಪ್ರಜಾವಾಣಿ ವಾರ್ತೆ
Published 19 ನವೆಂಬರ್ 2019, 13:20 IST
Last Updated 19 ನವೆಂಬರ್ 2019, 13:20 IST
ಅಯೋಧ್ಯೆ ತೀರ್ಪು ಕುರಿತು ಅಂಟಿಸಿರುವ ಭಿತ್ತಿಪತ್ರ
ಅಯೋಧ್ಯೆ ತೀರ್ಪು ಕುರಿತು ಅಂಟಿಸಿರುವ ಭಿತ್ತಿಪತ್ರ   

ಸುಂಟಿಕೊಪ್ಪ: ’ಬಾಬರಿ ತೀರ್ಪು, ನ್ಯಾಯದ ನಿರಾಕರಣೆ, ನ್ಯಾಯಕ್ಕಾಗಿ ಧ್ವನಿ ಎತ್ತಿರಿ’ ಎಂದು ಕನ್ನಡದಲ್ಲಿ ಮುದ್ರಿಸಿರುವ ಪೋಸ್ಟರ್ ಅನ್ನು ಅಂಟಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಸಂಘಟನೆಯೊಂದರ ವಿರುದ್ಧ ಸುಂಟಿಕೊಪ್ಪ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

ಇಲ್ಲಿನ ಗ್ರಾಮ ಪಂಚಾಯಿತಿ ಗೋಡೆ, ಬಸ್‌ ತಂಗುದಾಣದ ಗೋಡೆಯ ಮೇಲೆ ಈ ಭಿತ್ತಿಪತ್ರ ಅಂಟಿಸಲಾಗಿದೆ. ಸಾಮರಸ್ಯ ಕದಡುವ ಉದ್ದೇಶದಿಂದ ಕಿಡಿಗೇಡಿಗಳು ಈ ಕೃತ್ಯ ಎಸಗಿದ್ದು ಅವರನ್ನು ಪತ್ತೆಹಚ್ಚಿ ಕ್ರಮ ಕೈಗೊಳ್ಳಬೇಕು ಎಂದು ಗ್ರಾಮ ಪಂಚಾಯಿತಿಯಿಂದ ದೂರು ನೀಡಲಾಗಿದೆ. ಪಿಎಸ್‌ಐ ತಿಮ್ಮಪ್ಪ ಅವರು ದೂರು ದಾಖಲಿಸಿಕೊಂಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT