ADVERTISEMENT

ರೈತರಿಗೆ ಕಳಪೆ ಟಾರ್ಪಾಲು ಪೂರೈಸಿದರೆ ಕ್ರಮ: ಸಚಿವ ಬಿ.ಸಿ ಪಾಟೀಲ್‌

​ಪ್ರಜಾವಾಣಿ ವಾರ್ತೆ
Published 26 ಡಿಸೆಂಬರ್ 2021, 16:34 IST
Last Updated 26 ಡಿಸೆಂಬರ್ 2021, 16:34 IST
ಬಿ.ಸಿ.ಪಾಟೀಲ
ಬಿ.ಸಿ.ಪಾಟೀಲ   

ಬೆಂಗಳೂರು: ಕೃಷಿ ಇಲಾಖೆಯಿಂದ ರೈತರಿಗೆ ಟಾರ್ಪಾಲು ವಿತರಿಸುವ ಯೋಜನೆಗೆ ಕಳಪೆ ಗುಣಮಟ್ಟದ ಉತ್ಪನ್ನ ಪೂರೈಸುವ ಕಂಪನಿಗಳ ವಿರುದ್ಧ ಕಠಿಣ ಕ್ರಮ ಜರುಗಿಸಲಾಗುವುದು ಎಂದು ಕೃಷಿ ಸಚಿವ ಬಿ.ಸಿ. ಪಾಟೀಲ ಎಚ್ಚರಿಕೆ ನೀಡಿದ್ದಾರೆ.

‘ಪ್ರಸಕ್ತ ವರ್ಷ 2.39 ಲಕ್ಷ ಟಾರ್ಪಾಲುಗಳನ್ನು ವಿತರಿಸುವ ಯೋಜನೆ ಇದೆ. ಭಾರತೀಯ ಮಾಪನ ಸಂಸ್ಥೆಯು ನಿಗದಿಪಡಿಸಿರುವ ಗುಣಮಟ್ಟದ ಟಾರ್ಪಾಲುಗಳನ್ನೇ ಪೂರೈಸುವುದು ಕಡ್ಡಾಯ. ಇದಕ್ಕಾಗಿ 24 ಕಂಪನಿಗಳನ್ನು ಅಂತಿಮಗೊಳಿಸಲಾಗಿರುತ್ತದೆ. ಕಳಪೆ ಗುಣಮಟ್ಟದ ಟಾರ್ಪಾಲು ಪೂರೈಸುವ ಕಂಪನಿಯನ್ನು ಕಪ್ಪು ಪಟ್ಟಿಗೆ ಸೇರಿಸಿ, ಮೂರು ವರ್ಷ ಯೋಜನೆಯಿಂದ ಹೊರಗಿಡಲಾಗುಗುವುದು’ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಟಾರ್ಪಾಲಿನ ಮೇಲೆ ಕಂಪನಿಯ ಹೆಸರು, ಬ್ಯಾಚ್‌ ಸಂಖ್ಯೆ, ಭಾರತೀಯ ಮಾಪನ ಸಂಸ್ಥೆಯಿಂದ ಪಡೆದಿರುವ ಪರವಾನಗಿ ಸಂಖ್ಯೆಯನ್ನು ಕನ್ನಡ ಮತ್ತು ಇಂಗ್ಲಿಷ್‌ನಲ್ಲಿ ಮುದ್ರಿಸಬೇಕು. ಜಿಲ್ಲೆಗೆ ಒಂದರಂತೆ ಟಾರ್ಪಾಲುಗಳನ್ನು ಆಯ್ದು ಸೆಂಟ್ರಲ್‌ ಇನ್‌ಸ್ಟಿಟ್ಯೂಟ್‌ ಆಫ್‌ ಪೆಟ್ರೋಕೆಮಿಕಲ್ಸ್‌ ಅಂಡ್‌ ಎಂಜಿನಿಯರಿಂಗ್‌ ಟೆಕ್ನಾಲಜಿಯಲ್ಲಿ ಪರೀಕ್ಷಿಸಲಾಗುವುದು. ಕಳಪೆ ಗುಣಮಟ್ಟ ಕಂಡುಬಂದರೆ ಕ್ರಮ ಜರುಗಿಸಲಾಗುವುದು ಎಂದು ಹೇಳಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.