ADVERTISEMENT

ದಾಹ ನೀಗಿಸುವ ಸೇವೆಗೆ 20 ವರ್ಷ!

​ಪ್ರಜಾವಾಣಿ ವಾರ್ತೆ
Published 19 ಮೇ 2019, 19:03 IST
Last Updated 19 ಮೇ 2019, 19:03 IST
ರಬಕವಿಯ ತಮ್ಮ ಜಮೀನಿನ ಕೊಳವೆ ಬಾವಿ ಎದುರು ನಿಂತ ಯಲ್ಲಪ್ಪ ಕೊಡಗನೂರ
ರಬಕವಿಯ ತಮ್ಮ ಜಮೀನಿನ ಕೊಳವೆ ಬಾವಿ ಎದುರು ನಿಂತ ಯಲ್ಲಪ್ಪ ಕೊಡಗನೂರ   

ಬಾಗಲಕೋಟೆ: ರಬಕವಿ ಬನಹಟ್ಟಿ ನಗರದಲ್ಲಿ ಯಾವುದೇ ಓಣಿಯಲ್ಲಿ ನೀರಿನ ತೊಂದರೆ ಕಂಡು ಬಂದರೆ ತಕ್ಷಣ ನೆನಪಾಗುವುದು ರೈತ ಯಲ್ಲಪ್ಪ ಕೊಡಗಾನೂರ ಅವರ ಜಮೀನಿನ ಕೊಳವೆ ಬಾವಿ.

ಎರಡು ದಶಕಗಳಿಂದ ನಿರಂತರವಾಗಿ ಸಾರ್ವಜನಿಕರಿಗೆ ಉಚಿತವಾಗಿ ನೀರು ಒದಗಿಸಿದ ಶ್ರೇಯ ಅವರದ್ದು. 24 ಎಕರೆ ಜಮೀನು ಹೊಂದಿರುವ ಯಲ್ಲಪ್ಪ, ಕಬ್ಬು ಮತ್ತಿತರ ಬೆಳೆ ಬೆಳೆಯುತ್ತಾರೆ. ಸುತ್ತಲಿನ ಯಲ್ಲಟ್ಟಿ, ಹನಗಂಡಿ, ಚಿಮ್ಮಡ, ಹೊಸೂರ ಗ್ರಾಮಗಳ ಜನರೂ ಬೇಸಿಗೆಯಲ್ಲಿ ಇಲ್ಲಿಂದಲೇ ನೀರು ಒಯ್ಯುತ್ತಾರೆ. ಅಗ್ನಿ ಶಾಮಕ ವಾಹನಗಳಿಗೂ ಇಲ್ಲಿಂದಲೇ ನೀರು ತುಂಬಿಸಲಾಗುತ್ತದೆ.

ಮೊದಲಿದ್ದ ಕೊಳವೆಬಾವಿಯಲ್ಲಿಮೂರು ವರ್ಷಗಳ ಹಿಂದೆ ನೀರು ಕಡಿಮೆಯಾಗಿತ್ತು. ಮತ್ತೊಂದು ಕೊಳವೆಬಾವಿ ಕೊರೆಸಿ ಜನರಿಗೆ ಅನುಕೂಲ ಮಾಡಿಕೊಟ್ಟಿದ್ದಾರೆ.

ADVERTISEMENT

‘ಯಲ್ಲಪ್ಪ ಜನರಿಗೆ ದೊಡ್ಡ ಉಪಕಾರ ಮಾಡುತ್ತಿದ್ದಾರೆ. ಅದಕ್ಕೆ ಬೆಲೆ ಕಟ್ಟಲು ಸಾಧ್ಯವಿಲ್ಲ. ನಮ್ಮ ಟ್ಯಾಂಕರ್‌ಗಳು ಹಗಲು–ರಾತ್ರಿ ನೀರು ಒಯ್ಯುತ್ತವೆ. ಹಾಗಾಗಿ ನೀರು ಉಚಿತವಾಗಿ ಪಡೆದು ಕೊಳವೆ ಬಾವಿಯ ಕರೆಂಟ್ ಬಿಲ್ ಕಟ್ಟುತ್ತೇವೆ’ ಎನ್ನುತ್ತಾರೆ ಪೌರಾಯುಕ್ತಆರ್‌.ಎಂ.ಕೊಡುಗೆ.

‘ಭೂತಾಯಿ ಕೊಟ್ಟಿದ್ದನ್ನು ಜನರಿಗೆ ಕೊಡುತ್ತಿದ್ದೇನೆ. ಜನರ ಬಾಯಾರಿಕೆ ನೀಗಿಸಿದ ಸಂತೃಪ್ತಿ ನನಗೆ ಇದೆ’ ಎಂದು ಯಲ್ಲಪ್ಪ ಪ್ರತಿಕ್ರಿಯಿಸುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.