ADVERTISEMENT

ಮಧ್ಯಸ್ಥಿಕೆ ಕೇಂದ್ರ ಭಾನುವಾರವೂ ಕಾರ್ಯ ನಿರ್ವಹಣೆ

​ಪ್ರಜಾವಾಣಿ ವಾರ್ತೆ
Published 4 ಆಗಸ್ಟ್ 2018, 15:43 IST
Last Updated 4 ಆಗಸ್ಟ್ 2018, 15:43 IST

ಬೆಂಗಳೂರು: ‘ಬೆಂಗಳೂರಿನ ಮಧ್ಯಸ್ಥಿಕೆ ಕೇಂದ್ರ ಭಾನುವಾರವೂ ಕಾರ್ಯ ನಿರ್ವಹಿಸಲಿದೆ’ ಎಂದು ರಾಜ್ಯ ಹೈಕೋರ್ಟ್‌ ಮುಖ್ಯ ನ್ಯಾಯಮೂರ್ತಿ ದಿನೇಶ್‌ ಮಾಹೇಶ್ವರಿ ಪ್ರಕಟಿಸಿದರು.

ಮಧ್ಯಸ್ಥಿಕೆ ಕೇಂದ್ರದಲ್ಲಿ ಆಯೋಜಿಸಲಾಗಿದ್ದ ಕಾರ್ಯಕ್ರಮದಲ್ಲಿ ಶನಿವಾರ ಮಾತನಾಡಿದ ಅವರು, ‘ಬರುವ ಸೆಪ್ಟೆಂಬರ್‌ 2ರಿಂದಲೇ ಈ ನಿರ್ಧಾರ ಜಾರಿಗೆ ಬರಲಿದೆ. ಮೊದಲಿಗೆ ಪ್ರತಿ ಭಾನುವಾರ ಅರ್ಧ ದಿನ ಕಾರ್ಯ ನಿರ್ವಹಿಸಲಾಗುವುದು. ಇದರ ಯಶಸ್ಸನ್ನು ನೋಡಿಕೊಂಡು ಭವಿಷ್ಯದಲ್ಲಿ ಪೂರ್ಣದಿನದ ಕಾರ್ಯ ನಿರ್ವಹಣೆಗೆ ಸಜ್ಜುಗೊಳಿಸಲಾಗುವುದು’ ಎಂದರು.

ಕೇಂದ್ರದ ಅಧ್ಯಕ್ಷ ಹೈಕೋರ್ಟ್ ನ್ಯಾಯಮೂರ್ತಿ ರವಿ ಮಳಿಮಠ, ನಿರ್ದೇಶಕರುಗಳಾದ ನ್ಯಾಯಮೂರ್ತಿ ಅರವಿಂದ ಕುಮಾರ್ ಮತ್ತು ಬಿ.ವೀರಪ್ಪ ಉಪಸ್ಥಿತರಿದ್ದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.