ADVERTISEMENT

ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರ

​ಪ್ರಜಾವಾಣಿ ವಾರ್ತೆ
Published 3 ಮೇ 2019, 14:35 IST
Last Updated 3 ಮೇ 2019, 14:35 IST
ಬೆಂಗಳೂರು ಉತ್ತರ
ಬೆಂಗಳೂರು ಉತ್ತರ   

ಬಿಜೆಪಿ ಹಿಡಿತದಲ್ಲಿರುವ ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರಕ್ಕೆ ಲಗ್ಗೆ ಹಾಕಲು ಜೆಡಿಎಸ್‌ ಮತ್ತು ಕಾಂಗ್ರೆಸ್‌ ಇನ್ನಿಲ್ಲದ ಕಸರತ್ತು ನಡೆಸಿವೆ. ಕ್ಷೇತ್ರ ಪುನರ್‌ವಿಂಗಡಣೆ ಬಳಿಕ ನಡೆದ ಎರಡೂ ಲೋಕಸಭಾ ಚುನಾವಣೆಗಳಲ್ಲಿ ಬಿಜೆಪಿಯೇ ಗೆಲುವು ಸಾಧಿಸಿತ್ತು. ಇದಕ್ಕೂ ಮೊದಲು ಕಾಂಗ್ರೆಸ್‌ನ ಹಿಡಿತದಲ್ಲಿದ್ದ ಈ ಕ್ಷೇತ್ರದಲ್ಲಿ 2004 ರಲ್ಲಿ ಬಿಜೆಪಿಯ ಸಾಂಗ್ಲಿಯಾನ ಖಾತೆ ತೆರೆದರು.

2009 ರಲ್ಲಿ ಡಿ.ಬಿ.ಚಂದ್ರೇಗೌಡ, 2014 ಡಿ.ವಿ.ಸದಾನಂದಗೌಡ ಗೆಲುವು ಸಾಧಿಸಿದ್ದರು. ಒಕ್ಕಲಿಗರ ಮತದಾರರ ಸಂಖ್ಯೆ ಅಧಿಕವಾಗಿರುವ ಕಾರಣ ಮತ್ತು ಜೆಡಿಎಸ್‌– ಕಾಂಗ್ರೆಸ್‌ ಮೈತ್ರಿ ಏರ್ಪಟ್ಟರೆ ಎಚ್‌.ಡಿ.ದೇವೇಗೌಡ ಈ ಕ್ಷೇತ್ರದಿಂದ ಕಣಕ್ಕಿಳಿಯುವ ಸಾಧ್ಯತೆ ಇದೆ.

––––––––––

ADVERTISEMENT

ಆಕಾಂಕ್ಷಿಗಳು

ಬಿಜೆಪಿ– ಡಿ.ವಿ.ಸದಾನಂದಗೌಡ, ಡಾ.ಚಂದ್ರಶೇಖರ್

ಕಾಂಗ್ರೆಸ್‌– ರಕ್ಷ್‌ ರಾಮಯ್ಯ, ಕೃಷ್ಣ ಬೈರೇಗೌಡ, ಜಿ.ಸಿ.ಚಂದ್ರಶೇಖರ್

ಜೆಡಿಎಸ್‌– ಎಚ್‌.ಡಿ.ದೇವೇಗೌಡ

ಮತದಾರರ ಸಂಖ್ಯೆ: 24,01,472

ವಿಧಾನಸಭಾ ಕ್ಷೇತ್ರ ಬಲಾಬಲ

ಒಟ್ಟು 8

ಕಾಂಗ್ರೆಸ್‌ 5 ಯಶವಂತಪುರ, ಕೆ.ಆರ್.ಪುರ, ಬ್ಯಾಟರಾಯನಪುರ, ಯಶವಂತಪುರ, ಹೆಬ್ಬಾಳ,

ಬಿಜೆಪಿ 1 ಮಲ್ಲೇಶ್ವರ

ಜೆಡಿಎಸ್‌ 2 ಮಹಾಲಕ್ಷ್ಮಿ ಲೇಔಟ್,ಪುಲಿಕೇಶಿ ನಗರ

ಹಿಂದಿನ ಚುನಾವಣೆಗಳ ಲೆಕ್ಕಾಚಾರ

2014

ವಿಜೇತರು: ಡಿ.ವಿ.ಸದಾನಂದಗೌಡ , ಗೆಲುವಿನ ಅಂತರ:2,29,764

ಡಿ.ವಿ.ಸದಾನಂದಗೌಡ ;ಬಿಜೆಪಿ; 52.91%
ಸಿ.ನಾರಾಯಣಸ್ವಾಮಿ ;ಕಾಂಗ್ರೆಸ್‌; 35.99 %

ಅಬ್ದುಲ್‌ ಅಜೀಂ; ಜೆಡಿಎಸ್; 6.83%

ಇತರೆ; 4.27%
–––––

2009

ವಿಜೇತರು:ಡಿ.ಬಿ.ಚಂದ್ರೇಗೌಡ, ಗೆಲುವಿನ ಅಂತರ:59,665

ಡಿ.ಬಿ.ಚಂದ್ರೇಗೌಡ;ಬಿಜೆಪಿ;45.22%

ಸಿ.ಕೆ.ಜಾಫರ್‌ ಷರೀಫ್;ಕಾಂಗ್ರೆಸ್‌;39.26%

ಆರ್‌.ಸುರೇಂದ್ರಬಾಬು; ಜೆಡಿಎಸ್‌ 11.08%

ಇತರೆ;4.44%

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.