ADVERTISEMENT

ನಗರದ ಅಂಡರ್‌ ಪಾಸ್‌, ಫ್ಲೈಓವರ್‌, ಎಷ್ಟು ಸುರಕ್ಷಿತ?

ಆಡಿಟ್‌ ನಡೆಸದ ಬಿಬಿಎಂಪಿ l ಚರ್ಚೆಯಲ್ಲೇ ಕಾಲಹರಣ

​ಪ್ರಜಾವಾಣಿ ವಾರ್ತೆ
Published 3 ಜುಲೈ 2018, 20:24 IST
Last Updated 3 ಜುಲೈ 2018, 20:24 IST
ನಗರದ ಹೊರವರ್ತುಲ ರಸ್ತೆಯಲ್ಲಿರುವ ಜನತಾ ಬಜಾರ್ ವೃತ್ತದಲ್ಲಿ ಕೆಳ ಸೇತುವೆ (ಅಂಡರ್ ಪಾಸ್) ಕಾಮಗಾರಿ ಪ್ರಗತಿಯಲ್ಲಿರುವುದು -ಪ್ರಜಾವಾಣಿ ಚಿತ್ರ / ರಂಜು ಪಿ
ನಗರದ ಹೊರವರ್ತುಲ ರಸ್ತೆಯಲ್ಲಿರುವ ಜನತಾ ಬಜಾರ್ ವೃತ್ತದಲ್ಲಿ ಕೆಳ ಸೇತುವೆ (ಅಂಡರ್ ಪಾಸ್) ಕಾಮಗಾರಿ ಪ್ರಗತಿಯಲ್ಲಿರುವುದು -ಪ್ರಜಾವಾಣಿ ಚಿತ್ರ / ರಂಜು ಪಿ   

ಬೆಂಗಳೂರು: ನಗರದ ಅಂಡರ್‌ಪಾಸ್‌ ಮತ್ತು ಫ್ಲೈಓವರ್‌ಗಳು ಎಷ್ಟರ ಮಟ್ಟಿಗೆ ಗಟ್ಟಿಮುಟ್ಟಾಗಿದೆ ಎಂಬುದನ್ನು ಹೇಳಲು ಸಾಧ್ಯವಿಲ್ಲ.

ಇದಕ್ಕೆ ಮುಖ್ಯ ಕಾರಣ ಬಿಬಿಎಂಪಿ ಈವರೆಗೂಅಂಡರ್‌ಪಾಸ್‌ ಮತ್ತು ಫ್ಲೈಓವರ್‌ಗಳ ಸಾಮರ್ಥ್ಯ ಮತ್ತು ಬಾಳಿಕೆಯ ಪ್ರಮಾಣೀಕರಣ (ಆಡಿಟ್‌) ಮಾಡಿಲ್ಲ. ಆದ್ದರಿಂದ ಇವುಗಳ ಸುರಕ್ಷತೆಯ ಬಗ್ಗೆ ಪ್ರಶ್ನೆಗಳು ಎದ್ದಿವೆ.

‘ಅಂಡರ್‌ಪಾಸ್‌, ಫ್ಲೈಓವರ್‌ಗಳ ಆಡಿಟ್‌ ಮಾಡುವ ಕುರಿತುನಗರ ಸಂಚಾರ ತಜ್ಞರು ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆ ಮತ್ತು ಬೆಂಗಳೂರು ನಗರಾಭಿವೃದ್ಧಿ ಪ್ರಾಧಿಕಾರದೊಂದಿಗೆ ಮೂರು ವರ್ಷಗಳಿಂದ ಚರ್ಚೆ ನಡೆಸುತ್ತಲೇ ಬಂದಿದ್ದರೂ ಏನೂ ಪ್ರಯೋಜನವಾಗಿಲ್ಲ’ ಎಂದುಎಸ್‌ಟಿಯುಪಿ ಕನ್ಸಲ್ಟಂಟ್ ಸಂಸ್ಥೆಯ ನಿರ್ದೇಶಕ ಎ.ಟಿ.ಸ್ಯಾಮ್ಯುಯೆಲ್ ‘ಪ್ರಜಾವಾಣಿ’ಗೆ ತಿಳಿಸಿದ್ದಾರೆ.

ADVERTISEMENT

‘ಸಿವಿಲ್ ಎಂಜಿನಿಯರಿಂಗ್‌ ವಿದ್ಯಾರ್ಥಿಗಳು ಯೋಜನೆಗ‌ಳ ಆಡಿಟ್‌ ಮಾಡಲು ಮುಂದಾಗಿದ್ದರು. ಈ ಬಗ್ಗೆ ಬಿಬಿಎಂಪಿಯ ಹಿಂದಿನ ಆಡಳಿತಾಧಿಕಾರಿಯಾಗಿದ್ದ ಈಗಿನ ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿಟಿ.ಎಂ.ವಿಜಯ ಭಾಸ್ಕರ್‌ ಅವರೊಂದಿಗೆ ಸಭೆ ನಡೆಸಲಾಗಿತ್ತು. ಆಡಿಟ್‌ ಆಗಿಲ್ಲ' ಎಂದರು.

‘ಸಾರಿಗೆ ಇಲಾಖೆಯ ನಿಯಮದ ಅನುಸಾರ ಪ್ರತಿ ಐದು ವರ್ಷಗಳಿಗೊಮ್ಮೆ ಆಡಿಟ್‌ಮಾಡಬೇಕು. ಇಂಡಿಯನ್ ರೋಡ್ ಕಾಂಗ್ರೆಸ್ ನಿಯಮಗಳು ಮತ್ತು ಬ್ರಿಡ್ಜ್ ಇನ್‌ಸ್ಟಿಟ್ಯೂಟ್‌ ಪ್ರಕಾರ ಎಲ್ಲಾ ಮೂಲಸೌಕರ್ಯ ಯೋಜನೆಗಳ ಆಡಿಟಿಂಗ್ ಕಡ್ಡಾಯ. ಆದರೆ,ಐದು ವರ್ಷಗಳ ಹಿಂದೆ ಹಳೆ ವಿಮಾನ ನಿಲ್ದಾಣದ ಫ್ಲೈ ಓವರ್‌ ಕುರಿತು ಸ್ವತಂತ್ರವಾಗಿ ಆಡಿಟ್ ನಡೆಸಿ ಬಿಡಿಎಗೆ ವರದಿ ಸಲ್ಲಿಸಿದ್ದರೂ ಏನೂ ಕ್ರಮಕೈಗೊಂಡಿಲ್ಲ’ ಎಂದು ದೂರಿದರು.

‘ನಗರದಲ್ಲಿ ಯಾವುದೇ ಮೂಲಸೌಕರ್ಯ ಯೋಜನೆಗಳ ಆಡಿಟ್‌ ಮಾಡಿಲ್ಲ’ ಎಂದು ರಾಜ್ಯ ಸರ್ಕಾರದ ಸಲಹೆಗಾರ ಹಾಗೂ ಸಾರಿಗೆ ಮತ್ತು ಸಂಚಾರ ತಜ್ಞ ಎಂ.ಎನ್.ಶ್ರೀಹರಿ ತಿಳಿಸಿದ್ದಾರೆ.

‘ಮಾರ್ಚ್‌ನಲ್ಲೇ ಬಿಬಿಎಂಪಿ ಆಡಿಟ್‌ ನಡೆಸಬೇಕಿತ್ತು ಆದರೆ, ಈ ವರ್ಷ ಚುನಾವಣೆ ಇದ್ದ ಕಾರಣ ಆಡಿಟಿಂಗ್‌ ಮಾಡಲಾಗಿಲ್ಲ.ಫ್ಲೈಓವರ್‌ಗಳು, ಗ್ರೇಡ್‌ಸಪರೇಟರ್ಸ್‌ಅಂಡರ್‌ಪಾಸ್‌ಗಳನ್ನು ಬಿಬಿಎಂಪಿಗೆ ಹಸ್ತಾಂತರಿಸಿರುವುದರಿಂದ ಬಿಡಿಎ ಅವುಗಳ ಆಡಿಟ್ ಮಾಡುವುದಿಲ್ಲ’ ಎಂದು ಬಿಡಿಎ ಎಂಜಿನಿಯರ್ ಸದಸ್ಯ ಬಿ.ಎಲ್.ರವೀಂದ್ರ ಬಾಬು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.