ADVERTISEMENT

ಯು.ಪಿ.ಪುರಾಣಿಕ್‌ ನಿಧನ

ನಿಧನವಾರ್ತೆ

​ಪ್ರಜಾವಾಣಿ ವಾರ್ತೆ
Published 6 ಜನವರಿ 2022, 19:45 IST
Last Updated 6 ಜನವರಿ 2022, 19:45 IST
ಯು.ಪಿ.ಪುರಾಣಿಕ್‌
ಯು.ಪಿ.ಪುರಾಣಿಕ್‌   

ಬೆಂಗಳೂರು: ಬ್ಯಾಂಕಿಂಗ್‌ ತಜ್ಞ ಯು.ಪಿ.ಪುರಾಣಿಕ್‌ (81) ಅವರು ಗುರುವಾರ ನಿಧನರಾದರು. ಚಿಕ್ಕಲಸಂದ್ರದ ಸಾರ್ವಭೌಮನಗರದಲ್ಲಿ ನೆಲೆಸಿದ್ದ ಅವರಿಗೆ ಇಬ್ಬರು ಪುತ್ರರು ಹಾಗೂ‍ಪುತ್ರಿ ಇದ್ದಾರೆ.

ಬನಶಂಕರಿಯ ಚಿತಾಗಾರದಲ್ಲಿ ಶುಕ್ರವಾರ ಬೆಳಿಗ್ಗೆ 11 ಗಂಟೆಗೆ ಮೃತರ ಅಂತ್ಯಕ್ರಿಯೆ ನೆರವೇರಿಸಲಾಗುತ್ತದೆ ಎಂದು ಕುಟುಂಬದವರು ತಿಳಿಸಿದ್ದಾರೆ.

‘ಪ್ರಜಾವಾಣಿ’ಯಲ್ಲಿ ಪ್ರಕಟವಾಗುತ್ತಿದ್ದ ‘ಪ್ರಶ್ನೋತ್ತರ’ ಅಂಕಣದ ಮೂಲಕ ಅವರು ಹಣಕಾಸಿಗೆ ಸಂಬಂಧಿಸಿದ ಜನಸಾಮಾನ್ಯರ ಪ್ರಶ್ನೆಗಳಿಗೆ ಪರಿಹಾರ ಸೂಚಿಸುತ್ತಿದ್ದರು.

ADVERTISEMENT

ಬೈಂದೂರು ತಾಲ್ಲೂಕಿನ ಉಪ್ಪುಂದ ಗ್ರಾಮದಲ್ಲಿ ಜನಿಸಿದ್ದ ಅವರುಬ್ಯಾಂಕಿಂಗ್‌ ಕ್ಷೇತ್ರದಲ್ಲಿ ಸುಮಾರು 33 ವರ್ಷ ಸೇವೆ ಸಲ್ಲಿಸಿದ್ದರು. ಬೆಂಗಳೂರಿನಲ್ಲಿ ಸಿಂಡಿಕೇಟ್‌ ಬ್ಯಾಂಕ್‌ನ ವಿಭಾಗೀಯ ವ್ಯವಸ್ಥಾಪಕರಾಗಿ ನಿವೃತ್ತರಾಗಿದ್ದರು. ಬೆಂಗಳೂರು ಸಿಟಿ ಕೋ ಆಪರೇಟಿವ್‌ ಬ್ಯಾಂಕ್‌ನ (ಬಿಸಿಸಿಬಿ) ನಿರ್ದೇಶಕರಾಗಿ ಕಾರ್ಯನಿರ್ವಹಿಸಿದ್ದರು. ಯಾರಿಗೆ ಬೇಡ ದುಡ್ಡು, ವಿಶ್ವಗುರು ಶ್ರೀ ರಾಘವೇಂದ್ರರು, ಹಣಕಾಸು ಹಿತೈಷಿ ಪುಸ್ತಕಗಳನ್ನು ಅವರು ಬರೆದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.