ನವದೆಹಲಿ: ವಿಧಾನಸಭೆಯಲ್ಲಿ ‘ಮಧು ಬಲೆ’ ಬಗ್ಗೆ ಪ್ರಸ್ತಾಪಿಸುವಂತೆ ಚೀಟಿ ಬರೆದು ಕಳುಹಿಸಿದವರು ಯಾರು ಎಂಬುದು ಗೊತ್ತಿಲ್ಲ. ಆದರೆ, ಅದರಲ್ಲಿ ಇರುವ ವಿಷಯದ ಬಗ್ಗೆ ಹೇಳಿದರೆ ಕ್ರಾಂತಿ ಆಗಲಿದೆ’ ಎಂದು ಬಿಜೆಪಿ ಶಾಸಕ ಬಸನಗೌಡ ಪಾಟೀಲ ಯತ್ನಾಳ ಹೇಳಿದರು.
ಸೋಮವಾರ ಇಲ್ಲಿ ಸುದ್ದಿಗಾರರ ಜತೆಗೆ ಮಾತನಾಡಿದ ಅವರು, ‘ಹನಿಟ್ರ್ಯಾಪ್ ಆಗುತ್ತಿದೆ ಎಂದು ರಾಜಕಾರಣಿಗಳು ಹೇಳುತ್ತಿದ್ದರು. ಸಚಿವರೇ ಈಗ ಬಹಿರಂಗವಾಗಿ ಹೇಳಿಕೆ ನೀಡಿದ್ದಾರೆ. ಇದರಿಂದ ಕಾಂಗ್ರೆಸ್‌ನಲ್ಲಿ ಗಲಿಬಿಲಿ ಸೃಷ್ಟಿಯಾಗಿದೆ. ಯಾರು ಮಾಡಿಸಿದ್ದು ಎಂದು ರಾಜಣ್ಣ ಹೆಸರು ಹೇಳಲಿಲ್ಲ. ಮಹಾನಾಯಕ ಮಾಡಿರಬಹುದು. ಬಂದಿರುವ ಚೀಟಿಯಲ್ಲಿ ಏನಿತ್ತು ಎಂದು ಹೇಳಿದರೂ ಎರಡು ಪಕ್ಷಗಳ ನಾಯಕರು ಮನೆಗೆ ಹೋಗುತ್ತಾರೆ. ನಾನು ಯಾರಿಂದಲೂ ಬಳಕೆಯಾಗುವ ವ್ಯಕ್ತಿಯಲ್ಲ. ರಾಜ್ಯದ ಹಿತಕ್ಕಾಗಿ ಮಾತನಾಡುತ್ತಿದ್ದೇನೆ’ ಎಂದರು.
‘ರಾಜ್ಯದಲ್ಲಿ ಎರಡು ಕಂಪನಿಗಳಿವೆ. ಆ ಕಡೆ ಹಲೋ ಅಂದರೆ ಈ ಕಡೆ ಹಲೋ ಎಂದು ಹೇಳುವ ಒಂದು ಕಂಪನಿ ಹಾಗೂ ಜೈಶ್ರೀರಾಮ ಅಂದರೆ ಜೈಶ್ರೀರಾಮ ಎಂದು ಹೇಳುವ ಎರಡು ಕಂಪನಿಗಳು. ಶಾಸಕರ ಮಾನ ಹರಾಜು ಮಾಡುವ ಹಲ್ಕಾ ಕೆಲಸ ಮಾಡಬಾರದು. ಇಂತವರು ರಾಜಕೀಯದಿಂದ ಹೊರ ಹೋಗಬೇಕು. ಮುಖ್ಯಮಂತ್ರಿ ಆಗಬಾರದು’ ಎಂದು ಅವರು ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.