ADVERTISEMENT

ಸಚಿವ ಸಂಪುಟದಲ್ಲಿ ಅರ್ಧಕ್ಕಿಂತ ಹೆಚ್ಚು ಹಿರಿಯರು

​ಪ್ರಜಾವಾಣಿ ವಾರ್ತೆ
Published 4 ಆಗಸ್ಟ್ 2021, 19:48 IST
Last Updated 4 ಆಗಸ್ಟ್ 2021, 19:48 IST
ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರೊಂದಿಗೆ ಸಂಪುಟ ಸೇರಲಿರುವ ಶಾಸಕರು
ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರೊಂದಿಗೆ ಸಂಪುಟ ಸೇರಲಿರುವ ಶಾಸಕರು   

ಬೆಂಗಳೂರು: ಹೊಸ ಸಂಪುಟದಲ್ಲಿ ಅರ್ಧಕ್ಕಿಂತ ಹೆಚ್ಚು ಮಂದಿ ಹಿರಿಯರಿದ್ದಾರೆ. 27 ಮಂದಿ ಸಚಿವರು 50 ವರ್ಷ ಮತ್ತು ಅದಕ್ಕಿಂತ ಹಿರಿಯರು. ಇಬ್ಬರು ಮಾತ್ರ 50ರ ಕೆಳಗಿನ ವಯೋಮಾನದವರು.

73 ವರ್ಷ ವಯಸ್ಸಾಗಿರುವ ಕೆ.ಎಸ್‌. ಈಶ್ವರಪ್ಪ ಈ ಸಂಪುಟದಲ್ಲಿರುವ ಅತ್ಯಂತ ಹಿರಿಯರು. ಅವರ ನಂತರ 72 ವರ್ಷ ವಯಸ್ಸಾಗಿರುವ ಗೋವಿಂದ ಕಾರಜೋಳ ಇದ್ದಾರೆ. ವಿ. ಸೋಮಣ್ಣ, ಆರಗ ಜ್ಞಾನೇಂದ್ರ ಮತ್ತು ಎಂ.ಟಿ.ಬಿ. ನಾಗರಾಜು ಮೂವರೂ 70 ವರ್ಷ ವಯಸ್ಸಿನವರು.

ಬಸವರಾಜ ಬೊಮ್ಮಾಯಿ ಅವರ ಸಂಪುಟದ ಸದಸ್ಯರಲ್ಲಿ 70 ವರ್ಷ ಮತ್ತು ಅದಕ್ಕಿಂತ ಹೆಚ್ಚಿನ ವಯಸ್ಸಾಗಿರುವ ಐವರು, 60ರಿಂದ 69 ವರ್ಷ ವಯಸ್ಸಿನ 11 ಮಂದಿ, 50ರಿಂದ 59 ವರ್ಷ ವಯಸ್ಸಿನ 11 ಮಂದಿ ಹಾಗೂ 40ರಿಂದ 49 ವರ್ಷ ವಯಸ್ಸಿನ ನಡುವಿನ ಇಬ್ಬರು ಇದ್ದಾರೆ.

ADVERTISEMENT

ಕಾರ್ಕಳದ ವಿ. ಸುನೀಲ್‌ ಕುಮಾರ್‌ (45) ಈ ಸಂಪುಟದ ಅತ್ಯಂತ ಕಿರಿಯ ಸದಸ್ಯ. ಅವರ ನಂತರ ಸಚಿವ ಡಾ.ಕೆ. ಸುಧಾಕರ್‌ (48) ಇದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.