
ಪ್ರಜಾವಾಣಿ ವಾರ್ತೆ
ಬೀದರ್: ‘ಮಾಧ್ಯಮದವರು ಘನತೆ, ಗಾಂಭೀರ್ಯದಿಂದ ಇರಬೇಕು. ಉತ್ತಮ ರೀತಿಯಲ್ಲಿ ವರ್ತಿಸಬೇಕು. ವಿಧಾನಸೌಧ ಮೊಗಸಾಲೆಯಲ್ಲಿ ಬೇಕಾಬಿಟ್ಟಿ ಓಡಾಡಬಾರದು. ಮಾಧ್ಯಮದವರಿಗೆ ಎಲ್ಲ ರೀತಿಯ ಸಹಕಾರ ನೀಡಲಾಗುವುದು. ಈ ಕುರಿತು ಮುಖ್ಯಮಂತ್ರಿ ಜೊತೆಗೆ ಮಾತನಾಡುತ್ತೇನೆ’ ಎಂದು ವಿಧಾನ ಪರಿಷತ್ತಿನ ಸ್ಪೀಕರ್ ಬಸವರಾಜ ಹೊರಟ್ಟಿ ಹೇಳಿದರು.
'ಮಾಧ್ಯಮದವರು ಬಹಳ ಪ್ರಮುಖರು. ಕೆಲವರು ತಪ್ಪು ಮಾಡಿದರೆ ಎಲ್ಲರಿಗೂ ಅನ್ವಯಿಸಬಾರದು. ಹಿಂದಿನಂತೆ ರಾಜಕಾರಣ, ಮಾಧ್ಯಮ ರಂಗ ಸೇರಿದಂತೆ ಯಾವುದೂ ಇಲ್ಲ. ಆದರೆ, ಮಾಧ್ಯಮದವರು ಹೇಗೆ ಬೇಕೆನಿಸಿದ ರೀತಿಯಲ್ಲಿ ಇರಬಾರದು’ ಎಂದು ಇಲ್ಲಿ ಸೋಮವಾರ ಪತ್ರಕರ್ತರೊಂದಿಗೆ ಮಾತನಾಡುತ್ತ ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.