ADVERTISEMENT

ಬಿಇಎಲ್‌ನಿಂದ ಹೈಡ್ರೋಜನ್‌ ಇಂಧನ ಕೋಶ ಉತ್ಪಾದನೆ

ಪಿಟಿಐ
Published 19 ಅಕ್ಟೋಬರ್ 2022, 2:34 IST
Last Updated 19 ಅಕ್ಟೋಬರ್ 2022, 2:34 IST
   

ಬೆಂಗಳೂರು: ಸರ್ಕಾರಿ ಸ್ವಾಮ್ಯದ ಭಾರತ್‌ ಎಲೆಕ್ಟ್ರಾನಿಕ್ಸ್‌ ಲಿಮಿಟೆಡ್‌(ಬಿಇಎಲ್‌), ಅಮೆರಿಕ ಮೂಲದ ಟ್ರಿಟಾನ್‌ ಎಲೆಕ್ಟ್ರಿಕ್‌ ವೆಹಿಕಲ್‌(ಟಿಇವಿ) ಜೊತೆ ಹೈಡ್ರೋಜನ್‌ ಇಂಧನ ಕೋಶ ಉತ್ಪಾದನೆಗೆ ಸಂಬಂಧಿಸಿದಂತೆ ಸಹಭಾಗಿತ್ವ ಒಪ್ಪಂದಕ್ಕೆ ಸಹಿ ಹಾಕಿದೆ.

ಒಪ್ಪಂದದಂತೆ ಉಭಯ ಸಂಸ್ಥೆಗಳು ಭಾರತೀಯ ಮಾರುಕಟ್ಟೆಗೆ ಅಗತ್ಯ ತಂತ್ರಜ್ಞಾನ ಒದಗಿಸಲಿವೆ ಹಾಗೂ ಕಾಲಕ್ರಮೇಣ ರಫ್ತು ವಹಿವಾಟಿನತ್ತಲೂ ದೃಷ್ಟಿ ಹಾಯಿಸಲಿವೆ.

ಸಾರಿಗೆ ಮತ್ತು ಇಂಧನ ಕ್ಷೇತ್ರದಲ್ಲಿ ಶುದ್ಧ ಇಂಧನ ಉತ್ತೇಜನ ನೀಡುವ ಕೇಂದ್ರ ಸರ್ಕಾರದ ಗುರಿಯ ಅನ್ವಯ ಉಭಯ ಸಂಸ್ಥೆಗಳು ಕಾರ್ಯನಿರ್ವಹಿಸಲಿವೆ. ಇ-ಮೊಬಿಲಿಟಿ ಸೇರಿದಂತೆ ವಿವಿಧ ಅಗತ್ಯ ಕ್ಷೇತ್ರಗಳ ಶುದ್ಧ ಇಂಧನದ ಬೇಡಿಕೆ ಪೂರೈಸುವ ‌ಉದ್ದೇಶವನ್ನು ಈ ಸಹಭಾಗಿತ್ವ ಹೊಂದಿದೆ ಎಂದು ಕಂಪನಿ ಪ್ರಕಟಣೆಯಲ್ಲಿ ತಿಳಿಸಿದೆ.

ADVERTISEMENT

ಟಿಇವಿ ಭಾರತದಲ್ಲಿ ಸಂಶೋಧನೆ ಮತ್ತು ಅಭಿವೃದ್ಧಿ ಘಟಕ ಸ್ಥಾಪಿಸಲಿದೆ. ಇತ್ತೀಚೆಗಷ್ಟೆ ಕಂಪನಿ ಹೈಡ್ರೋಜನ್‌ ಬೆಂಬಲಿತ ವಾಹನ ಉತ್ಪಾದನೆ ಮಾರುಕಟ್ಟೆಗೆ ಕಾಲಿಟ್ಟಿದ್ದು, ದ್ವಿಚಕ್ರ, ತಿಚಕ್ರ ವಾಹನ ಮತ್ತು ಬಸ್‌ಗಳನ್ನು ತಯಾರಿಸುತ್ತಿದೆ ಎಂದು ಕಂಪನಿ ಹೇಳಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.